Chandrayana 3: ಚಂದ್ರಯಾನ 3 ಯಶಸ್ವಿ ಉಡಾವಣೆ: ಇಸ್ರೋದಲ್ಲಿ ಸಂಭ್ರಮದ ಹೊನಲು... ವಿಡಿಯೋ ನೋಡಿ - ಇಸ್ರೋ
🎬 Watch Now: Feature Video
ಶ್ರೀ ಹರಿಕೋಟಾ: ಭಾರತದ ಕನಸಿನ ಯೋಜನೆ ಚಂದ್ರಯಾನ 3 ರ ಎಲ್ವಿಎಂ3 ಎಂ4 ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ಉಡಾವಣೆಗೊಂಡಿದ್ದು, ಈ ಸಾಧನೆಯ ಕ್ಷಣಗಳನ್ನು ಚಂದ್ರಯಾನ 3 ಯೋಜನೆಯ ನಿರ್ದೇಶಕ ಪಿ ವೀರ ಮುತ್ತುವೇಲ್ ಹಾಗೂ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಸೇರಿದಂತೆ ವಿಜ್ಞಾನಿಗಳು ಸಂಭ್ರಮಾಚರಣೆ ಮಾಡಿದರು. ಎಲ್ವಿಎಂ3 ಎಂ4 ವಾಹನವು ಕಕ್ಷೆಗೆ ಯಶಸ್ವಿಯಾಗಿ ಉಡಾವಣೆಗೊಂಡ ನಂತರ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಉಡಾವಣೆ ಯಶಸ್ವಿಯಾಗಿರುವ ಬಗ್ಗೆ ವಿಜ್ಞಾನಿಗಳ ಸಂತಸ ಅವರ ಮಾತುಗಳಲ್ಲೇ ಕಂಡು ಬರುತ್ತಿದೆ. ಅವರ ಸಂತಸವನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ವಿಡಿಯೋದಲ್ಲಿ ಅವರಿಗಾಗುತ್ತಿರುವ ಸಂತಸ ಎದ್ದು ಕಾಣುತ್ತಿದೆ. "ಚಂದ್ರಯಾನ-3 ತನ್ನ ನಿಖರವಾದ ಕಕ್ಷೆಯಲ್ಲಿ ಚಂದ್ರನತ್ತ ತನ್ನ ಪ್ರಯಾಣವನ್ನು ಈಗಾಗಲೇ ಪ್ರಾರಂಭಿಸಿದೆ. ಬಾಹ್ಯಾಕಾಶ ನೌಕೆಯ ಸ್ಥಿತಿ ಎಲ್ಲಾ ರೀತಿಯಲ್ಲೂ ಸಾಮಾನ್ಯವಾಗಿದೆ" ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಭಾರತದ 3 ನೇ ಚಂದ್ರಯಾನ ಯಶಸ್ವಿಯಾಗಿ ಉಡಾವಣೆಗೊಂಡಿರುವುದಕ್ಕೆ ಇಸ್ರೋದ ಅಧ್ಯಕ್ಷ ಎಸ್ ಸೋಮನಾಥ್ ಮತ್ತು ಅವರ ತಂಡವನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಅಭಿನಂದಿಸಿದ್ದಾರೆ.
ಇದನ್ನೂ ನೋಡಿ: Chandrayana 3: ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ... ಮಹಾತ್ವಾಂಕ್ಷೆ ಯೋಜನೆಗೆ ವಿದ್ಯಾರ್ಥಿಗಳಿಂದ ಶುಭಾಶಯ