ಚಂದ್ರಯಾನ 3 ಯಶಸ್ವಿ ಉಡಾವಣೆಗಾಗಿ ಕೈಲಾಸನಾಥರ್​ ದೇವಾಲಯದಲ್ಲಿ 'ಚಂದ್ರ ಪೃಥಿ ಹೋಮ' - navgraha temple

🎬 Watch Now: Feature Video

thumbnail

By

Published : Jul 14, 2023, 6:05 PM IST

ತಮಿಳುನಾಡು: ಚಂದ್ರಯಾನ 3 ಯಶಸ್ವಿ ಉಡಾವಣೆಗಾಗಿ ಶುಕ್ರವಾರ ತಮಿಳುನಾಡಿನ ತಿಂಗಳೂರು ಅರುಲ್ಮಿಕು ಕೈಲಾಸನಾಥರ್ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ರಾಷ್ಟ್ರೀಯ ದೇವಾಲಯಗಳ ಒಕ್ಕೂಟದಿಂದ 'ಚಂದ್ರ ಪೃಥಿ ಹೋಮ' ಆಯೋಜಿಸಲಾಗಿತ್ತು.

ಶಿವಾಚಾರ್ಯರು ಕೈಲಾಸನಾಥರ ಮೂಲವರ ಸನ್ನಿಧಿ  ಎದುರು ವಿವಿಧ ರೀತಿಯ ಯಾಗ ಸಾಮಗ್ರಿಗಳೊಂದಿಗೆ ಚಂದ್ರ ಪೃಥಿ ಹೋಮ ನೆರವೇರಿಸಿದರು. ಯಾಗ ಮುಗಿದ ನಂತರ 'ಚಂದ್ರ'ನಿಗೆ ವಿಭೂತಿ, ದ್ರಾವಿಯಂ ಪುಡಿ, ಅರಿಶಿನ ಪುಡಿ, ಹಾಲು, ಮೊಸರು ಮತ್ತು ಶ್ರೀಗಂಧದ ಅಭಿಷೇಕ ಮಾಡಲಾಯಿತು. ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯ ಯಶಸ್ವಿಯಾಗಲೆಂದು ಪ್ರಾರ್ಥಿಸಿದರು.

ಕೈಲಾಸನಾಥರ್​​​​​​ ನವಗ್ರಹ ದೇವಾಲಯವಾಗಿದ್ದು, ಕೈಲಾಸನಾಥರ್​ ಇಲ್ಲಿಗೆ ಬಂದು ಚಂದ್ರನನ್ನು ಪೂಜಿಸಿ ದುಷ್ಟರಿಂದ ಮುಕ್ತಿ ಹೊಂದಿದರು ಎಂದು ಹೇಳಲಾಗುತ್ತದೆ.

ಚಂದಿರನಾರ್ ಎಂದೂ ಕರೆಯಲ್ಪಡುವ ತಿಂಗಳೂರಿನ ಕೈಲಾಸನಾಥರ್ ದೇವಾಲಯವು ಹಿಂದೂ ದೇವಾಲಯವಾಗಿದೆ. ಅಲ್ಲದೇ ಇದು ಕುಂಭಕೋಣಂನ ನವಗ್ರಹ ದೇವಾಲಯಗಳಲ್ಲಿ ಒಂದಾಗಿದೆ. ತಿಂಗಲ್ ಎಂದರೆ ಚಂದ್ರ ಎಂದರ್ಥ. ಆದ್ದರಿಂದ ಈ ದೇವಾಲಯಕ್ಕೆ ಈ ಹೆಸರು ಬಂದಿದೆ. ದೇವಾಲಯದ ಮುಖ್ಯ ದೇವರು ಸೋಮ ಅಥವಾ ಚಂದ್ರನಾಗಿದ್ದರೂ, ದೇವಾಲಯದಲ್ಲಿನ ಮುಖ್ಯ ಮೂರ್ತಿ ಕೈಲಾಸನಾಥರ್ ಅಥವಾ ಭಗವಾನ್ ಶಿವನದ್ದಾಗಿದೆ. 

ಇದನ್ನೂ ಓದಿ: ಚಂದ್ರಯಾನ 3 ಉಡಾವಣೆ ಯಶಸ್ವಿಗೆ ಪರಿಸರ ಪ್ರೇಮಿಗಳಿಂದ ವಿಶೇಷ ಪೂಜೆ - ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.