ಮೈಸೂರು ದಸರಾ: ಗಮನಸೆಳೆದ ಕರಾವಳಿಯ ಚೆಂಡೆವಾದನ- ವಿಡಿಯೋ - ಚೆಂಡೆ ವಾದನ ಕಾರ್ಯಕ್ರಮ
🎬 Watch Now: Feature Video
Published : Oct 17, 2023, 4:56 PM IST
ಮೈಸೂರು: ನಾಡ ಹಬ್ಬ ಮೈಸೂರು ದಸರಾ ಅಂಗವಾಗಿ ಇಂದು ಬೆಳಿಗ್ಗೆ ಚಿಕ್ಕಗಡಿಯಾರ ಆವರಣದಲ್ಲಿ ನಡೆದ 'ಚೆಂಡೆ ವಾದನ' ಕಾರ್ಯಕ್ರಮದಲ್ಲಿ ಮಂಗಳೂರು ಮೂಲದ ಪ್ರಕಾರವನ್ನು ಮೇಘನಾದ ಚೆಂಡೆ ಬಳಗ, 40 ನಿಮಿಷಗಳ ಕಾಲ ಯಶಸ್ವಿಯಾಗಿ ನಡೆಸಿಕೊಟ್ಟಿತು. ಚೆಂಡೆ ವಾದನ ತಂಡದಲ್ಲಿ ಶ್ರೀಮತಿ ಅರುಣ್ ಕುಮಾರ್, ವಿನುತ ಕಾರ್ತಿಕೇಯನ್, ರೂಪಾ ಅನಂತ್, ಅರ್ಚನಾ ಅನಿಲ್ ಹಂದೆ, ಶ್ರೀವಿದ್ಯಾ, ವಾಣಿಶ್ರೀ ಭಟ್, ವಿಶ್ರುತ್ ಎ.ಧನ್ಯ, ಕಾರ್ತಿಕ್ ನಾಯಕ್, ಪ್ರಜ್ವಲ್ ಮತ್ತು ಆದರ್ಶ ರಾವ್ ಇದ್ದರು. 6 ಮಹಿಳೆಯರು ಹಾಗೂ 4 ಪುರುಷರನ್ನೊಳಗೊಂಡ ತಂಡ ಪ್ರದರ್ಶನ ನೀಡಿತು.
"ಚೆಂಡೆ ವಾದ್ಯ ನುಡಿಸುವಾಗ ಕನಿಷ್ಠ 1 ತಾಳ, 1 ಡೋಲು, 1 ಚೆಂಡೆ ಇರಬೇಕಾದ ನಿಯಮವಿದ್ದು, ಚೆಂಡೆ ವಾದ್ಯ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತವನ್ನು ಅವಲಂಬಿತವಾಗಿರುತ್ತದೆ. ಕರಾವಳಿಯ ಜನರು ಹೆಚ್ಚಾಗಿ ದೇವಾಲಯದ ದೇವರ ನೃತ್ಯ, ಯಕ್ಷಗಾನ ಹಾಗೂ ಜಾನಪದ ಕಲೆಗಳಲ್ಲಿ ಬಳಸುವ ಸಂಪ್ರದಾಯಕ ಚರ್ಮವಾದ್ಯ ಚೆಂಡೆ, ತನ್ನ ಮೂಲ ರೂಪ, ಆಕಾರ, ಶೈಲಿಯಲ್ಲಿ ಕಿಂಚಿತ್ತೂ ಬದಲಾಗದೆ, ಪ್ರತ್ಯೇಕ ಮಹತ್ವವನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ" ಎಂದು ಶ್ರೀಮತಿ ಅರುಣ್ ಕುಮಾರ್ ತಿಳಿಸಿದರು.
ಇದನ್ನೂ ಓದಿ: ಅಂಬಾವಿಲಾಸ ಅರಮನೆ ಮುಂಭಾಗದ ಆವರಣದಲ್ಲಿ ರಂಗೋಲಿ ಸ್ಪರ್ಧೆ- ವಿಡಿಯೋ ನೋಡಿ