ಬೀದಿ ಬದಿ ಮಲಗಿದ್ದ ಬಿಡಾಡಿ ದನವನ್ನು ಹೊತ್ತೊಯ್ದ ಖದೀಮರು: ವಿಡಿಯೋ - ಬಿಡಾಡಿ ದನ
🎬 Watch Now: Feature Video
ವಿಜಯನಗರ: ರಾತ್ರೋರಾತ್ರಿ ನಾಲ್ವರು ಕಳ್ಳರು ಸೇರಿ ರಸ್ತೆಯಲ್ಲಿ ಬದಿ ಮಲಗಿದ್ದ ಬಿಡಾಡಿ ದನವೊಂದನ್ನು ಹೊತ್ತೊಯ್ದಿರುವ ಘಟನೆ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ. ಈ ಕೃತ್ಯದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ಬದಿಯ ಬಯಲು ಜಾಗದಲ್ಲಿ ಮೂರು ದನಗಳು ಮಲಗಿದ್ದವು. ಈ ವೇಳೆ, ಏಕಾಏಕಿ ಬಂದ ನಾಲ್ವರು ಕಳ್ಳರು ದನವೊಂದರ ಕೊಂಬನ್ನು ಹಿಡಿದು, ನಂತರ ಕತ್ತಿಗೆ ಹಗ್ಗವನ್ನು ಕಟ್ಟಿ ಚಿತ್ರಹಿಂಸೆ ನೀಡಿ ಪಿಕಪ್ ವಾಹನದ ಬಳಿಗೆ ಎಳೆದೊಯ್ದಿದ್ದಾರೆ.
ನಂತರ ನಾಲ್ಕು ಮಂದಿ ಸೇರಿ ಒಂದು ಕಡೆ ಬಾಲ, ಮತ್ತೊಂದು ಕಡೆ ಕೊಂಬನ್ನು ಹಿಡಿದು ಪಿಕಪ್ ವಾಹನದಲ್ಲಿ ಹತ್ತಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಪೊಲೀಸರು ದನವನ್ನು ಹೊತ್ತೊಯ್ದಿದವರನ್ನು ಅದಷ್ಟು ಬೇಗ ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಒಳಪಡಿಸಿಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ರೀತಿ ಬಿಡಾಡಿ ದನ - ಕಾರುಗಳನ್ನು ಗುರಿಯಾಗಿಸಿಕೊಂಡಿರುವ ಗುಂಪು ಅವುಗಳನ್ನು ರಾತ್ರೋರಾತ್ರಿ ಕಳ್ಳತನ ಮಾಡಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Watch Video: ಬೆಡ್ ರೂಮಿಗೆ ಬಂದು ಯುವಕನ ಪಕ್ಕ ಹಾಯಾಗಿ ಮಲಗಿದ್ದ ನಾಗರ ಹಾವು!