ಪಿಕ್ ಪಾಕೆಟ್ ಮಾಡುವಾಗ ಸಿಕ್ಕಿಬಿದ್ದ ಕಳ್ಳಿಯರಿಗೆ ಧರ್ಮದೇಟು: ವಿಡಿಯೋ - ETV Bharath Karnataka
🎬 Watch Now: Feature Video
ನೆಲಮಂಗಲದ ಜನತಾ ಬಜಾರ್ ಬಳಿ ಪಿಕ್ ಪಾಕೆಟ್ ಮಾಡಲು ಯತ್ನಿಸಿ ಖತರ್ನಾಕ್ ಕಳ್ಳಿಯರು ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಇಂದು ಜನರ ಪಿಕ್ ಪಾಕೆಟ್ ಮಾಡಲು ಬಂದಿದ್ದ ಕಳ್ಳಿಯರನ್ನು ರೆಡ್ ಹ್ಯಾಂಡಾಗಿ ಹಿಡಿದು ಥಳಿಸಿದ್ದಾರೆ. ಕಳ್ಳಿಯರಾದ ಚೌಡಮ್ಮ ಮತ್ತು ಯಶೋಧ ತುಮಕೂರಿನ ಅಜ್ಜಂಪುರ ಕಳ್ಳರ ಗ್ಯಾಂಗ್ ಎಂದು ತಿಳಿದು ಬಂದಿದ್ದು, ಸಾರ್ವಜನಿಕರೇ ಕಳ್ಳಿಯರನ್ನು ಹಿಡಿದು ನೆಲಮಂಗಲ ಟೌನ್ ಪೊಲೀಸರಿಗೆ ಒಪ್ಪಿಸಿದ್ದಾರೆ.
Last Updated : Feb 3, 2023, 8:36 PM IST