3 ಕೆ.ಜಿ ಹೆರಾಯಿನ್​ ಸಾಗಿಸುತ್ತಿದ್ದ ಪಾಕ್​ ಡ್ರೋನ್​ ಹೊಡೆದುರುಳಿಸಿದ ಬಿಎಸ್‌ಎಫ್‌: ವಿಡಿಯೋ

🎬 Watch Now: Feature Video

thumbnail

ಅಮೃತಸರ (ಪಂಜಾಬ್): ಪಂಜಾಬ್‌ನ ಅಮೃತಸರದ ಗಡಿಯಲ್ಲಿ 3 ಕೆ.ಜಿ ತೂಕದ ಮಾದಕ ವಸ್ತು ಹೆರಾಯಿನ್​ ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ಹೊಡೆದುರುಳಿಸಿದೆ. ಎರಡು ಪ್ಯಾಕೆಟ್​ಗಳ ಹೆರಾಯಿನ್​ ವಶಕ್ಕೆ ಪಡೆಯಲಾಗಿದೆ.

ಅಮೃತಸರದ ಗಡಿ ಭಾಗದಲ್ಲಿ ಬರುವ ಬಿಒಪಿ ರಾಜತಾಲ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್‌ನ 144 ಕಾರ್ಪ್ಸ್‌ ಪಡೆ, ಪಾಕ್​ನಿಂದ ಹಾರಿಬಂದ ಡ್ರೋನ್​ ಗಮನಿಸಿದ್ದಾರೆ. ತಕ್ಷಣವೇ ಕಾರ್ಯಾಚರಣೆಗಿಳಿದಿದ್ದಾರೆ. ತಪಾಸಣೆಯಲ್ಲಿ ಹೆರಾಯಿನ್ ಇರುವ 2 ಪ್ಯಾಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮೃತಸರದ ಬಿಎಸ್ಎಫ್ ಕಮಾಂಡೆಂಟ್ ಅಜಯ್ ಕುಮಾರ್ ಮಿಶ್ರಾ ತಿಳಿಸಿದರು.

ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಿ ಬರುತ್ತಿತ್ತು. ಇದರಲ್ಲಿ ಬಿಳಿಯ ಪ್ಯಾಕೆಟ್​ಗಳು ಇರುವುದನ್ನು ಗಮನಿಸಿ ದಾಳಿ ಮಾಡಿ ಹೊಡೆದುರುಳಿಸಲಾಗಿದೆ. ಕಳ್ಳಸಾಗಣಿಕೆ ತಡೆಯಲು ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. 

ಈ ಮೂಲಕ ಸೇನೆ ಪಾಕಿಸ್ತಾನದ ಮತ್ತೊಂದು ಕೃತ್ಯವನ್ನು ವಿಫಲಗೊಳಿಸಿದೆ. ಇದಕ್ಕೂ ಮೊದಲು ಭಾನುವಾರವೂ ಇದೇ ಭಾಗದಿಂದ ಬಂದ ಡ್ರೋನ್ ಅನ್ನು ಹೊಡೆದು ಹಾಕಲಾಗಿತ್ತು. ಇದರಲ್ಲೂ ಮಾದಕವಸ್ತು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಮಳೆ ನೀರು: ಕೊಚ್ಚಿ ಹೋದ ಚಿನ್ನಾಭರಣ!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.