ಸಚಿವ ಡಾ ಸುಧಾಕರ್ ಪರ ಹಾಸ್ಯ ನಟ ಬ್ರಹ್ಮಾನಂದಂ, ಪ್ರೇಮ್, ಅನು ಪ್ರಭಾಕರ್ ಮತಬೇಟೆ - Chikkaballapur Assembly Constituency
🎬 Watch Now: Feature Video
ಚಿಕ್ಕಬಳ್ಳಾಪುರ : ವಿಧಾನಸಭಾ ಕ್ಷೇತ್ರದಲ್ಲಿ ಸ್ಟಾರ್ ಪ್ರಚಾರಕರ ಮೆರುಗು ದಿನೇ ದಿನೆ ಹೆಚ್ಚಾಗುತ್ತಿದೆ. ಇಂದು ಬಿಜೆಪಿ ಅಭ್ಯರ್ಥಿ ಆರೋಗ್ಯ ಸಚಿವ ಡಾ. ಸುಧಾಕರ್ ಪರ ಟಾಲಿವುಡ್ ಹಾಸ್ಯನಟ ಬ್ರಹ್ಮಾನಂದಂ ತಾಲೂಕಿನ ಹಲವೆಡೆ ಪ್ರಚಾರ ನಡೆಸಿ ಮತಯಾಚನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಪುರ ಸೇರಿದಂತೆ ಹಳೇಹಳ್ಳಿ, ಮಂಚೇನಹಳ್ಳಿ ಸೇರಿದಂತೆ ಹಲವೆಡೆ ಸಚಿವ ಡಾ ಸುಧಾಕರ್ ಪರ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಪ್ರಚಾರ ನಡೆಸುತ್ತಿದ್ದು, ತೆಲುಗಿನ ಡೈಲಾಗ್ ಹೊಡೆದು ತಮ್ಮ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ. ಬ್ರಹ್ಮಾನಂದಂ ಅವರನ್ನ ನೋಡಲು ಜನ ಮುಗಿಬಿದ್ದಿದ್ದು, ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಟ್ಟರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಆರೋಗ್ಯ ಸಚಿವ ಡಾ ಸುಧಾಕರ್ ಪರ ಸ್ಯಾಂಡಲ್‌ವುಡ್ ನಟ ನಟರಾದ ದಿಗಂತ್, ನೆನಪಿರಲಿ ಪ್ರೇಮ್, ಹರ್ಶಿಕಾ ಪೂಣಚ್ಚ, ಭುವನ್, ಅನು ಪ್ರಭಾಕರ್ ಸೇರಿದಂತೆ ಕೆಲವರು ಕಳೆದ ವಾರದಿಂದ ಪ್ರಚಾರವನ್ನು ನಡೆಸುತ್ತಿದ್ದಾರೆ. ಮನೆಮನೆಗೂ ಭೇಟಿ ಕೊಟ್ಟು ಸಚಿವ ಸುಧಾಕರ್ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಿ ಅವರಿಗೆ ಮತ ನೀಡುವಂತೆ ಮತಯಾಚನೆ ನಡೆಸಿದ್ದಾರೆ.
ಸದ್ಯ ಇಂದು ತೆಲುಗು ಭಾಷಿಕರ ಪ್ರಭಾವ ಇರುವ ಭಾಗಗಳಲ್ಲಿ ಬ್ರಹ್ಮಾನಂದಂ ಚುನಾವಣಾ ಪ್ರಚಾರ ಕೈಗೊಂಡಿದ್ದು, ಹಾಸ್ಯದ ಡೈಲಾಗ್ ಹೇಳುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಬಾರಿಯೂ ಸಚಿವ ಸುಧಾಕರ್ ಪರ ಪ್ರಚಾರ ನಡೆಸಿ ಮತ್ತೆ ಬರುವುದಾಗಿ ತಿಳಿಸಿದ್ದರು. ಅದರಂತೆ ಇಂದು ಪ್ರಚಾರ ಕಾರ್ಯಕೈಗೊಂಡಿದ್ದು, ಸಚಿವ ಸುಧಾಕರ್ ಅವರನ್ನು ಕೊಂಡಾಡಿದರು. ಮತ್ತೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಮತ್ತೆ ಸಚಿವರನ್ನಾಗಿ ಮಾಡುವಂತೆ ಮತಯಾಚನೆ ನಡೆಸಿದ್ದಾರೆ. ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದು, ಅಧಿಕಾರಾವಧಿಯಲ್ಲಿ ಮಾಡಿದ ಸೇವೆಯಿಂದ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಬ್ರಹ್ಮಾನಂದಂ ಹೊಗಳಿದ್ದಾರೆ.
ಇದನ್ನೂ ಓದಿ : ಹುಟ್ಟೂರಿನಲ್ಲಿ ಜಿ.ಟಿ.ದೇವೇಗೌಡ ಮತ ಪ್ರಚಾರ, ತಮಟೆ ಸದ್ದಿಗೆ ಡ್ಯಾನ್ಸ್- ವಿಡಿಯೋ