ನದಿಯಲ್ಲಿ ಮಗುಚಿದ ದೋಣಿ, ಪ್ರಾಣಾಪಾಯದಿಂದ ಪಾರಾದ 8 ಮಂದಿ: ವಿಡಿಯೋ.. - national news
🎬 Watch Now: Feature Video
ಹಮೀರ್ಪುರ (ಉತ್ತರ ಪ್ರದೇಶ): ದೋಣಿಯಲ್ಲಿ ಮೃತದೇಹ ಸಾಗಿಸುತ್ತಿದ್ದ ವೇಳೆ ಅಸಮತೋಲನ ಉಂಟಾಗಿ ದೋಣಿ ಮಗುಚಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರದ ಕೆನ್ ನದಿಯಲ್ಲಿ ನಡೆದಿದೆ. ದೋಣಿ ಮಗುಚಿದ ಪರಿಣಾಮ ದೋಣಿಯಲ್ಲಿದ್ದ 8 ಮಂದಿ ನೀರಿಗೆ ಜಿಗಿದು ನಂತರ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶುಕ್ರವಾರ ಬೈಜೆಮಾವು ಗ್ರಾಮದ ನಿವಾಸಿ ಧನಿರಾಮ್ (70) ಎಂಬವರ ಸಾವನ್ನಪ್ಪಿದ್ದರು, ಅವರ ಅಂತ್ಯಕ್ರಿಯೆಗೆ ಮೃತರ ಕುಟುಂಬಸ್ಥರು ಪಕ್ಕದ ಗ್ರಾಮಕ್ಕೆ ಕೆನ್ ನದಿಯ ಮೂಲಕ ತೆರಳುತ್ತಿದ್ದರು. ದೋಣಿಯು ನದಿಯ ಮಧ್ಯಭಾಗದಲ್ಲಿ ಚಲಿಸುತ್ತಿರುವ ವೇಳೆ ಅಸಮತೋಲನ ಉಂಟಾಗಿ ದೋಣಿ ಮಗುಚಿದೆ. ಇದರಿಂದ ದೋಣಿಯಲ್ಲಿದ್ದ 8 ಮಂದಿ ನೀರಿಗೆ ಹಾರಿದ್ದಾರೆ ಅದೃಷ್ಟವಶಾತ್ ದೋಣಿಯಲ್ಲಿ ಚಲಿಸುತ್ತಿದ್ದ ಎಲ್ಲರಿಗೂ ಈಜು ಬರುತ್ತಿದ್ದರಿಂದ ಎಲ್ಲರೂ ಈಜಿ ದಡ ಸೇರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಜೊತೆಗೆ ಮೃತದೇಹವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ : ಪರೀಕ್ಷೆ ಪಾಸ್ ಮಾಡಲು ದೈಹಿಕ ಸಂಬಂಧ ಬೆಳೆಸುವಂತೆ ವಿದ್ಯಾರ್ಥಿನಿಗೆ ಶಿಕ್ಷಕನ ಬೇಡಿಕೆ: ವಿಡಿಯೋ ವೈರಲ್