ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸಿಗದ ಆಸನ.. ಮುನಿಸಿಕೊಂಡು ಮಧ್ಯೆದಲ್ಲೇ ಎದ್ದೋದ ಬಿಜೆಪಿ ಸಂಸದ! - ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸಿಗದ ಆಸನ
🎬 Watch Now: Feature Video
ಬಿಜೆಪಿ ರಾಜ್ಯಸಭಾ ಸಂಸದ ಅನಿಲ್ ಅಗರ್ವಾಲ್ ಅವರು ಭಾನುವಾರ ವೇದಿಕೆಯಲ್ಲಿ ಆಸನ ನೀಡದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್ ಕಾರ್ಯಕ್ರಮದಿಂದ ಮುನಿಸಿಕೊಂಡು ವಾಪಸ್ ಹೋದರು. ಉತ್ತರಪ್ರದೇಶದ ಗಾಜಿಯಾಬಾದ್‌ನ ಕಮಲಾ ನೆಹರು ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಯುನಾನಿ ವೈದ್ಯಕೀಯ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಪ್ರಧಾನಿ ವರ್ಚುವಲ್ ಆಗಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಸಂಸದರು ಕಾರ್ಯಕ್ರಮದ ಮಧ್ಯದಲ್ಲಿಯೇ ಕೋಪದಿಂದ ಕಾರಿನತ್ತ ತೆರಳಿದರು. ಈ ಬಗ್ಗೆ ಆಯುಷ್ ಸಚಿವರಿಗೆ ಪತ್ರ ಬರೆಯುವುದಾಗಿ ಅಗರ್ವಾಲ್ ವಿಡಿಯೋದಲ್ಲಿ ಹೇಳಿದ್ದಾರೆ.
Last Updated : Feb 3, 2023, 8:35 PM IST