ನನ್ನ ಗಂಡನನ್ನು ಶಾಸಕನನ್ನಾಗಿ ಮಾಡು ದೇವರೇ.. ಬಿಜೆಪಿ ಅಭ್ಯರ್ಥಿ ಪತ್ನಿಯಿಂದ ಹರಕೆ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Jan 30, 2023, 5:54 PM IST

Updated : Feb 3, 2023, 8:39 PM IST

ಕೋಲಾರ : ಮಾಲೂರು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಗುರುತಿಸಿಕೊಂಡಿರುವ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ ಅವರು, ಮಾಲೂರಿನ ಮಾರಿಯಮ್ಮ ತಾಯಿಗೆ ಪತ್ರ ಬರೆದು ತನ್ನ ಗಂಡನನ್ನು ಶಾಸಕನನ್ನಾಗಿ ಮಾಡುವಂತೆ ಬೇಡಿಕೊಂಡಿದ್ದಾರೆ. ಅಲ್ಲದೇ ಸೊಣಪನಹಟ್ಟಿಯಲ್ಲಿ ನಡೆದ ಬಸವಣ್ಣನ ಜಾತ್ರೆಯಲ್ಲಿ ಗಂಡನಿಗೆ ತಾಲೂಕಿನ ಜನರ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ವಿಶೇಷ ಹರಕೆ ಕಟ್ಟಿಕೊಂಡಿದ್ದಾರೆ.

ಸೊಣಪನಹಟ್ಟಿಯಲ್ಲಿ ಬಸವಣ್ಣನ ಜಾತ್ರಾ ಮಹೋತ್ಸವದಲ್ಲಿ ವಿಶೇಷ ಆಚರಣೆಯೊಂದು ನಡೆದುಕೊಂಡು ಬಂದಿದ್ದು, ಯಾರಾದರೂ ಭಕ್ತಿಯಿಂದ ತಮ್ಮ ಮನದ ಆಸೆಯನ್ನು ಬಾಳೆಹಣ್ಣಿನ ಮೇಲೆ ಬರೆದು ಅಥವಾ ಮನಸ್ಸಿನಲ್ಲಿ ಹರಕೆ ಕಟ್ಟಿಕೊಂಡು ದೇವರ ರಥದ ಮೇಲೆ ಎಸೆದರೆ ಮುಂದಿನ ಜಾತ್ರೆಯ ಹೊತ್ತಿಗೆ ಹರಕೆ ಫಲಿಸುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರಾಜ್ಯದ ವಿವಿದೆಡೆಯಿಂದ ಜಾತ್ರೆಗೆ ಆಗಮಿಸುವ ಭಕ್ತರು ಬಸವಣ್ಣ ದೇವರ ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಬೇಡಿಕೆಗಳನ್ನು ಪೂರೈಸುವಂತೆ ಕೋರುತ್ತಾರೆ.

ಜಾತ್ರೆಗೆ ಬಂದಿದ್ದ ಹೂಡಿ ವಿಜಯ್ ಕುಮಾರ್ ಅವರ ಪತ್ನಿ ಶ್ವೇತಾ ಅವರು ಇಲ್ಲಿನ ರಾಸುಗಳಿಗೆ ಮೇವು  ನೀಡಿ ಬಳಿಕ ಬಸವಣ್ಣನ ಆಶೀರ್ವಾದ ಪಡೆದು ನನ್ನ ಪತಿ ವಿಜಯ್ ಕುಮಾರ್‌ರನ್ನು ಶಾಸಕರನ್ನಾಗಿ ಮಾಡುವಂತೆ ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದರು. ಜೊತೆಗೆ ಶಕ್ತಿ ದೇವತೆ ಮಾಲೂರಿನ ಮಾರಿಕಾಂಬಾ ದೇವಿಗೆ ಹರಕೆ ಪತ್ರ ಬರೆದು ಹುಂಡಿಕೆ ಹಾಕಿದ್ದಾರೆ. 

ಇದನ್ನೂ ಓದಿ :'ಇಚ್ಛೆಪಟ್ಟ ಯುವಕ ಬಿಟ್ಟು ಬೇರೆ ಯಾರೂ ತಾಳಿ ಕಟ್ಟದಿರಲಿ': ಹುಂಡಿಯಲ್ಲಿ ಸಿಕ್ತು ಯುವತಿಯ ಪತ್ರ!

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.