ಕೆಲವು ನವೀನ ಕಂಪನಿಗಳಿಗೆ ನೆಲೆ ಈ ನಮ್ಮ ಬೆಂಗಳೂರು: ಅಶ್ವಿನಿ ವೈಷ್ಣವ್ - ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್
🎬 Watch Now: Feature Video
ಬೆಂಗಳೂರು: G-20 Digital Economy Ministers’ Meeting: "ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಯನ್ನು ವ್ಯಾಖ್ಯಾನಿಸುವಂತಹ ವಿಷಯಗಳ ಕುರಿತು ಚರ್ಚಿಸಲು ನಾವು ಒಟ್ಟುಗೂಡಿದ್ದೇವೆ. ಬೆಂಗಳೂರು ವಿಶ್ವದ ಕೆಲವು ನವೀನ ಕಂಪನಿಗಳಿಗೆ ನೆಲೆಯಾಗಿದೆ'' ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Union Minister Ashwini Vaishnaw) ಬಣ್ಣಿಸಿದ್ದಾರೆ.
ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್‌ಗಾಗಿ ಭಾರತೀಯ ಪ್ರೆಸಿಡೆನ್ಸಿ ಆಯ್ಕೆ ಮಾಡಿದ ಮೂರು ಆದ್ಯತೆಯ ಕ್ಷೇತ್ರಗಳೆಂದರೆ, ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (ಡಿಪಿಐ), ಡಿಜಿಟಲ್ ಆರ್ಥಿಕತೆ ಮತ್ತು ಡಿಜಿಟಲ್ ಸ್ಕೇಲಿಂಗ್‌ನಲ್ಲಿ ಭದ್ರತೆ, ಇವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದಲ್ಲಿ ಪ್ರಧಾನಿ ಮೋದಿ ಅವರು ನಂಬಿಕೆ ಇಟ್ಟಿದ್ದಾರೆ'' ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು (ಶನಿವಾರ) ನಡೆದ ಜಿ- 20 ಡಿಜಿಟಲ್ ಆರ್ಥಿಕ ಸಚಿವರ ಸಭೆಯಲ್ಲಿ (G-20 Digital Economy Ministers’ Meeting) ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿದರು.
ಇದನ್ನೂ ಓದಿ: ಅಯೋಧ್ಯಾ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ - ವಿಡಿಯೋ
ಆಪರೇಷನ್ ಹಸ್ತ ಟೀಕೆ: ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದೇನು?- ವಿಡಿಯೋ