ಯಾರಿಗೇನು ಕಮ್ಮಿ ಇಲ್ಲ: 15 ಟನ್ ಕಬ್ಬು ತುಂಬಿದ ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದ ಮಹಿಳೆ - ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video


Published : Oct 30, 2023, 12:57 PM IST
ಚಿಕ್ಕೋಡಿ (ಬೆಳಗಾವಿ): ಮಹಿಳೆಯರು ಪುರುಷರಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ನಾರಿಯರು ತಮ್ಮ ಸಾಧನೆಯ ಹೆಜ್ಜೆಯನ್ನು ಇರಿಸುತ್ತಿದ್ದಾರೆ. ಅದರಲ್ಲೂ, ಇಲ್ಲೊಬ್ರು ಮಹಿಳೆ 15 ಟನ್ ಕಬ್ಬು ತುಂಬಿದ ಟ್ರ್ಯಾಕ್ಟರ್ ಅನ್ನು ಚಲಾಯಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿಂಧಿಗಟ್ಟಿ ಗ್ರಾಮದ ಮಹಿಳೆ ಮಹಾದೇವಿ ಎಮ್ಮ್ಯಾಗೋಳ ಕಬ್ಬನ್ನು ತುಂಬಿದ ಟ್ರ್ಯಾಕ್ಟರ್ ಅನ್ನು ಚಲಾಯಿಸಿದ ಮಹಿಳೆ. 15 ಟನ್ ಕಬ್ಬನ್ನು ಹಿಡಕಲ್ ಡ್ಯಾಂ ಗ್ರಾಮದಿಂದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಗೆ ದಿನನಿತ್ಯ 20 ಕಿ.ಮೀ ದೂರ ಟ್ರ್ಯಾಕ್ಟರ್ ಚಲಾಯಿಸಿ ಕೊಂಡೊಯ್ದು ಸಾಹಸ ಮೆರೆದಿದ್ದಾರೆ.
ಕಬ್ಬು ತುಂಬಿದ ಟ್ರ್ಯಾಕ್ಟರ್ ಚಲಾಯಿಸುವುದು ಅಷ್ಟೊಂದು ಸುಲಭವಲ್ಲ. ಇಂತಹ ಕೆಲಸಕ್ಕೆ ಎಂಟೆದೆಯ ಬಂಟನೇ ಬರಬೇಕು. ಆದರೆ, ಬೆಳಗಾವಿ ರೈತ ಮಹಿಳೆ ಈ ಮಾತನ್ನು ಸುಳ್ಳಾಗಿಸಿದ್ದಾರೆ. 15 ಟನ್ ಕಬ್ಬು ತುಂಬಿದ ಟ್ರ್ಯಾಕ್ಟರ್ ಅನ್ನು ಸರಾಗವಾಗಿ ಚಲಾಯಿಸಿ ನೆಟ್ಟಿಗರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಿದ್ದಾರೆ.