ದೇವಸ್ಥಾನಕ್ಕೆ ಬಂದು ಗಂಟೆ ಬಾರಿಸಿದ ಜಾಂಬವಂತರು: ಅಚ್ಚರಿಯ ವಿಡಿಯೋ - ದೇವಸ್ಥಾನಕ್ಕೆ ಕರಡಿಗಳು ದಿನವೂ ಭೇಟಿ
🎬 Watch Now: Feature Video
ಭಕ್ತರು, ದೇವಸ್ಥಾನಕ್ಕೆ ಬಂದು ಗಂಟೆ ಬಾರಿಸಿ, ದೈವಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಆಂಧ್ರಪ್ರದೇಶದಲ್ಲಿ 2 ಕರಡಿಗಳು ದೇವಸ್ಥಾನಕ್ಕೆ ನುಗ್ಗಿದ್ದು, ದೇವರ ಮುಂದಿರುವ ಗಂಟೆ ಬಾರಿಸಿ ಅಚ್ಚರಿ ಮೂಡಿಸಿವೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸತ್ಯಸಾಯಿ ಜಿಲ್ಲೆಯ ಗ್ರಾಮವೊಂದಕ್ಕೆ ಕಾಡಿನಿಂದ ಬಂದಿರುವ ಇಬ್ಬರು ಜಾಂಬವಂತರು ದೇವರ ಮುಂದಿನ ಗಂಟೆಯ ಹಗ್ಗವನ್ನು ಬಾಯಲ್ಲಿ ಕಚ್ಚಿಕೊಂಡು ಎಳೆದು ಬಾರಿಸಿವೆ. ದೇವಸ್ಥಾನಕ್ಕೆ ಕರಡಿಗಳು ದಿನವೂ ಭೇಟಿ ನೀಡುತ್ತಿದ್ದು, ಅವುಗಳಿಂದ ಜನರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅರ್ಚಕರು ಹೇಳಿದ್ದಾರೆ.
Last Updated : Feb 3, 2023, 8:31 PM IST