ಗ್ರಾಮಕ್ಕೆ ನುಗ್ಗಿ ಮೊಟ್ಟೆ-ಹಣ್ಣು ತಿಂದು ದಾಂಧಲೆ ಮಾಡಿ ಪರಾರಿಯಾಗಿದ್ದ ಕರಡಿ ಸೆರೆ - ಬೋನಿಗೆ ಬಿದ್ದ ಕರಡಿ
🎬 Watch Now: Feature Video
Published : Dec 14, 2023, 1:38 PM IST
|Updated : Dec 14, 2023, 6:15 PM IST
ಚಾಮರಾಜನಗರ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಕರಡಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ನಡೆದಿದೆ. ಕಳೆದ ಶನಿವಾರ ಅಜ್ಜಿಪುರ ಗ್ರಾಮದ ಪೆಟ್ಟಿಗೆ ಅಂಗಡಿಗಳ ಮೇಲೆ ಈ ಕರಡಿ ಆಹಾರ ಅರಸಿ ಬಂದು ಮೊಟ್ಟೆ, ಹಣ್ಣು ತಿಂದು, ಧ್ವಂಸ ಮಾಡಿ ಹೋಗಿತ್ತು. ಅದರ, ದಾಂಧಲೆ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿ ಹಿಡಿಯಲು ಅಜ್ಜಿಪುರ ಗ್ರಾಮದ ಹೊರವಲಯದಲ್ಲಿ ಬೋನನ್ನು ಇಟ್ಟು ಕರಡಿ ಸೆರೆಗೆ ಸತತ ಪ್ರಯತ್ನಪಟ್ಟಿದ್ದರು ಅದರಂತೆ ಆಹಾರ ಅರಸಿ ಬಂದ ಜಾಂಬವಂತ ಬೋನಿನಲ್ಲಿ ಸೆರೆಯಾಗಿದೆ.
ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು: ಕಳೆದ ಶನಿವಾರ ರಾತ್ರಿ ಕರಡಿಯು ಗ್ರಾಮದ ಪೆಟ್ಟಿಗೆ ಅಂಗಡಿಗಳಿಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ನಾಶಗೊಳಿಸಿ, ಭಯದ ವಾತಾವರಣವನ್ನು ಉಂಟು ಮಾಡಿತ್ತು. ಕರಡಿ ಗ್ರಾಮಕ್ಕೆ ಬಂದು ಪೆಟ್ಟಿಗೆ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಸಿಸಿಟಿವಿಯಲ್ಲಿ ಸೆರೆಯಾದ ಚಿತ್ರಣವನ್ನು ನೋಡಿ ರಾತ್ರಿ ವೇಳೆ ಗ್ರಾಮಸ್ಥರು ಓಡಾಡುವುದಕ್ಕೂ ಭಯಪಟ್ಟಿದ್ದರು. ಈಗ ಕರಡಿ ಬೋನಿಗೆ ಬಿದ್ದ ಹಿನ್ನೆಲೆಯಲ್ಲಿ ಭಯದ ವಾತಾವರಣದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಯಾದ ಕರಡಿಯನ್ನು ಸುರಕ್ಷಿತವಾಗಿ ಮತ್ತೇ ಕಾಡಿಗೆ ಬಿಡಲಾಗಿದೆ.
ಇದನ್ನೂ ಓದಿ: ಹೆರಿಗೆ ಮತ್ತು ಕಣ್ಣಿನ ಆಸ್ಪತ್ರೆಗೆ ನುಗ್ಗಿದ ಚಿರತೆ; ಬೆಚ್ಚಿಬಿದ್ದ ಸಿಬ್ಬಂದಿ ರೋಗಿಗಳು - ವಿಡಿಯೋ