ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಬಾಗಲಕೋಟೆ ಯುವತಿ; ಧೈರ್ಯ ತುಂಬಿದ ಅಧಿಕಾರಿಗಳು
🎬 Watch Now: Feature Video
Published : Oct 11, 2023, 8:09 PM IST
ಬಾಗಲಕೋಟೆ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಜಿಲ್ಲೆಯ ರಬಕವಿ ಪಟ್ಟಣದ ಪೂಜಾ ಎಂಬ ಯುವತಿ ಸಿಲುಕಿರುವ ಕುರಿತು ವರದಿಯಾಗಿದ್ದು ಆತಂಕದಲ್ಲಿದ್ದ ತಂದೆ-ತಾಯಿಗೆ ಪಟ್ಟಣದ ಅಧಿಕಾರಿಗಳು ಧೈರ್ಯ ತುಂಬಿದರು. ರಬಕವಿಯ ಸಂಗಪ್ಪ ಉಮದಿ ಅವರ ಪುತ್ರಿ ಪೂಜಾ ಕಳೆದ ಎರಡು ವರ್ಷಗಳ ಹಿಂದೆ ಟಿಸಿಎಸ್ ಕಂಪನಿ ಮೂಲಕ ಇಸ್ರೇಲ್‌ನಲ್ಲಿಯೇ ವಾಸವಾಗಿದ್ದಾರೆ. ಸದ್ಯ ಅಲ್ಲಿನ ಪರಿಸ್ಥಿತಿ ಗೊತ್ತಾಗುತ್ತಿದ್ದಂತೆ ಪೂಜಾರ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಈ ವಿಚಾರ ತಿಳಿದು ಜಮಖಂಡಿಯ ಎಸಿ ಸಂತೋಷ ಕಾಮಗೊಂಡ, ತಹಶಿಲ್ದಾರ್ ಗಿರೀಶ್ ಹಾಗೂ ಡಿಎಸ್ಪಿ ಪಿ.ಶಾಂತವೀರ ಸೇರಿ ಸಂಗಪ್ಪ ಅವರ ಮನೆಗೆ ತೆರಳಿ ಧೈರ್ಯ ಹೇಳಿದ್ದಾರೆ.
ಅಧಿಕಾರಿಗಳ ಸಮ್ಮುಖದಲ್ಲೇ ಪೂಜಾ ತನ್ನ ತಂದೆ-ತಾಯಿ ಜೊತೆಗೆ ಮಾತನಾಡಿದ್ದು ಸದ್ಯಕ್ಕೆ ಇಲ್ಲಿ ಯಾವುದೇ ತೊಂದರೆ ಇಲ್ಲ, ತಾನು ಯುದ್ಧ ಪ್ರದೇಶದಿಂದ 300 ಕಿಮೀ ದೂರದಲ್ಲಿರುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳ ಭೇಟಿಯಿಂದಾಗಿ ನಮಗೆ ಸಮಾಧಾನವಾಗಿದೆ. ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸಹ ಮಾತಾಡಿದ್ದಾರೆ. ನಮ್ಮ ಮಗಳು ಕೂಡ ಚೆನ್ನಾಗಿರುವುದಾಗಿ ಫೋನ್ ಮೂಲಕ ಮಾಹಿತಿ ನೀಡಿದ್ದಾಳೆ. ಅಲ್ಲಿನ ಸರ್ಕಾರ ಕೂಡ ಎಲ್ಲ ರೀತಿಯಲ್ಲಿ ಮಾಹಿತಿ ನೀಡುತ್ತಿದ್ದು, ಮುನ್ನೆಚ್ಚರಿಕೆಯಿಂದ ಇರುವಂತೆ ಹಾಗೂ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪುತ್ರಿ ಪೂಜಾ ತಮಗೆ ಮಾಹಿತಿ ನೀಡಿರುವುದಾಗಿ ಆಕೆಯ ಪಾಲಕರು ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್‌ನಲ್ಲಿ ಸಿಲುಕಿರುವ ಉತ್ತರಕನ್ನಡದ ಹೋಂ ನರ್ಸ್: ಬಂಕರ್ನಲ್ಲಿರುವುದಾಗಿ ಪತಿಗೆ ಮಾಹಿತಿ