ಚಾಮರಾಜನಗರ ಗಡಿಯಲ್ಲಿ ಮರಿ ಆನೆ ಅಟ್ಯಾಕ್...ಸವಾರ ಜಸ್ಟ್ ಮಿಸ್, ಬೈಕ್ ಪೀಸ್-ಪೀಸ್ - ಚಾಮರಾಜನಗರ
🎬 Watch Now: Feature Video
ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿ ಮಾಡಿ ಬೈಕ್ ಜಖಂ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸುತ್ತಿದ್ದ ಬೈಕ್ ಸವಾರನ ಮೇಲೆ ಮರಿ ಆನೆಯೊಂದು ದಾಳಿ ಮಾಡಲು ಮುಂದಾಗಿದೆ. ಭಯಭೀತರಾದ ಬೈಕ್ ಸವಾರ ತಮ್ಮ ವಾಹನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಆನೆ ಬೈಕ್ ತುಳಿಯುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಆದರೆ, ಬೈಕ್ ಮೇಲೆ ಪ್ರತಾಪ ತೋರಿದ ಆನೆ ವಾಹನ ತುಳಿದು ಜಖಂ ಮಾಡಿದೆ. ಬಳಿಕ, ಜನರ ಕಿರುಚಾಟ ಕೇಳಿ ಕಾಡಿಗೆ ತೆರಳಿದೆ. ನಾಲ್ ರೋಡ್ ಭಾಗವೆಲ್ಲಾ ಕಾಡಿನಿಂದ ಆವೃತ್ತವಾಗಿದ್ದು, ಆನೆಗಳ ಸಂಚಾರ ಸಾಮಾನ್ಯವಾಗಿದೆ. ಆದರೆ, ಬೈಕ್ ಮೇಲೆ ದಾಳಿ ಮಾಡುವುದು ಕಳವಳಕಾರಿ ಘಟನೆ ಬೆಚ್ಚಿ ಬೀಳಿಸಿದೆ. ಇನ್ನು, ಕೃಷಿ ಜಮೀನುಗಳಿಗೂ ಆನೆ ಲಗ್ಗೆ ಹಾಕಲಿದ್ದು ರೈತರನ್ನು ಆನೆಹಿಂಡು ಹೈರಾಣು ಮಾಡಲಿದೆ.
ಇದನ್ನೂ ಓದಿ: Leopard carrying a dead deer: ಜಿಂಕೆಯನ್ನು ತಿನ್ನಲು ಎಳೆದೊಯ್ದ ಚಿರತೆ - ವಿಡಿಯೋ