ಬೈಕ್ಗೆ ಕಾರು ಟಚ್ ಆಗಿದೆ ಎಂಬ ನೆಪವೊಡ್ಡಿ ಹಲ್ಲೆಗೆ ಯತ್ನ: ಬೆಂಗಳೂರಲ್ಲಿ ಘಟನೆ - ಆನೇಕಲ್
🎬 Watch Now: Feature Video
Published : Jan 10, 2024, 9:32 AM IST
ಆನೇಕಲ್(ಬೆಂಗಳೂರು): ರಸ್ತೆ ಮಧ್ಯದಲ್ಲಿ ಕಾರು ಹಾಗೂ ಬೈಕ್ ಟಚ್ ಆಗಿದೆ ಎಂಬ ನೆಪವೊಡ್ಡಿ ಹಲ್ಲೆಗೆ ಮುಂದಾದ ಘಟನೆ ಭಾನುವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ತಿಬೆಲೆ - ಸರ್ಜಾಪುರ ರಸ್ತೆಯಲ್ಲಿ ಚರಣ್ ಪಾಲ್‌ಸಿಂಗ್ ಎಂಬ ಉತ್ತರ ಭಾರತ ಮೂಲದ ವ್ಯಕ್ತಿ ಸರ್ಜಾಪುರ ಸಮೀಪದ ಕೋಟಗಾನಹಳ್ಳಿ ಗ್ರಾಮದ ಬಳಿ ವಾಸವಿದ್ದಾರೆ. ಇವರು ಕೆಲಸಕ್ಕೆಂದು ಅತ್ತಿಬೆಲೆ ಕಡೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಇವರ ಕಾರು ಬೈಕ್ಗೆ ಟಚ್ ಆಗಿದೆ ಎಂಬ ನೆಪ ಹೇಳಿ ಏಕಾಏಕಿ ನಾಲ್ಕೈದು ವಾಹನಗಳಲ್ಲಿ ಪುಂಡರು ಕಾರನ್ನು ಅಡ್ಡ ಹಾಕಿದ್ದಾರೆ. ಇದರಿಂಧಾಗಿ ಭಯಬೀತಗೊಂಡ ಚರಣ್ ಪಾಲ್‌ಸಿಂಗ್ ಅವರಿಂದ ತಪ್ಪಿಸಿಕೊಳ್ಳಲು ಕಾರನ್ನು ದ್ವಿಚಕ್ರ ವಾಹನದ ಮೇಲೆ ಹತ್ತಿಸಿಕೊಂಡು ನೇರವಾಗಿ ಸರ್ಜಾಪುರ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿದ್ದಾರೆ. ಘಟನೆಯು ಸಂಪೂರ್ಣವಾಗಿ ಕಾರಿನ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರರಣ ದಾಖಲಾಗುತ್ತಿದ್ದಂತೆ ಸರ್ಜಾಪುರ ಪೊಲೀಸರು ಮೂರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹೇಮಂತ್, ಪ್ರಜ್ವಲ್, ಗೌತಮ್ ಬಂಧಿತ ಆರೋಪಿಗಳಾಗಿದ್ದು, ಪ್ರಕರಣ ಸಂಬಂಧ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಬೆಂಗಳೂರು ಸುರಕ್ಷಿತವಲ್ಲ : ಚರಣ್ ಪಾಲ್ ಸಿಂಗ್ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಹಂಚಿಕೊಂಡಿದ್ದು, ಯಾವುದೇ ಅಪಘಾತ ಸಂಭವಿಸಿಲ್ಲ. ಇದು ಕೇವಲ ಸುಲಿಗೆ ಮತ್ತು ಕಿರುಕುಳ ಪ್ರಕರಣವಾಗಿದ್ದು, ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡದ್ದೇವೆ. ಈ ಯುವಕರು ತಾವು ಕುಡಿದಿರುವುದಾಗಿ ಮತ್ತು ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಾವು ಸುರಕ್ಷಿತವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ; ಆಕೆಯ ಪ್ರಾಣ ಹೋಯಿತೆಂದು ತಿಳಿದು ಆತ್ಮಹತ್ಯೆ ಮಾಡಿಕೊಂಡ