ಧಾರವಾಡದಲ್ಲಿ ಪುಂಡರ ಅಟ್ಟಹಾಸ : ಅರೆ ನಗ್ನರಾಗಿ ಬರಬೇಡಿ ಎಂದಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ - ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ
🎬 Watch Now: Feature Video
ಧಾರವಾಡ : ಜಿಲ್ಲೆಯಲ್ಲಿ ಹಾಡಹಗಲೇ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ನಗರದ ಕೃಷಿ ವಿವಿ ಬಳಿ ಇರುವ ವಿಕೆ ಪ್ಯಾಲೇಸ್‌ನ ಹೋಟೆಲ್‌ಗೆ ನುಗ್ಗಿದ ಕಿಡಿಗೇಡಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅರೆ ನಗ್ನರಾಗಿ ಬಂದಿದ್ದ ಯುವಕರಿಗೆ ಬುದ್ಧಿ ಹೇಳಿದ್ದಕ್ಕೆ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಏನಿದು ಘಟನೆ? : ಮೊದಲು ಇಬ್ಬರು ಯುವಕರು ಅರೆ ನಗ್ನರಾಗಿ ಬಂದಿದ್ದು, ಈ ರೀತಿ ಹೋಟೆಲ್‌ಗೆ ಬರಬೇಡಿ ಇತರರಿಗೆ ತೊಂದರೆಯಾಗುತ್ತದೆ ಎಂದು ಮಾಲೀಕರು ಬುದ್ಧಿ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರು ತಮ್ಮ ಗುಂಪಿನವರನ್ನು ಕರೆದುಕೊಂಡು ಬಂದು ದಾಂಧಲೆ ಮಾಡಿ, ಹಲ್ಲೆ ಮಾಡಿದ್ದಾರೆ. ಪರಿಣಾಮ ಅಖಿಲೇಶ ಯಾದವ್, ದೀಪಾ ಯಾದವ್, ದೀಪಕ್ ಯಾದವ್ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪುಂಡರು ರೌಡಿಸಂ ನಡೆಸಿದ ದೃಶ್ಯಾವಳಿಗಳು ಹೋಟೆಲ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಉದ್ಯಮಿ ಮೇಲೆ ಹಲ್ಲೆ: ಮಹಿಳೆ ಸೇರಿ ಇಬ್ಬರು ಆರೋಪಿಗಳ ವಿರುದ್ಧ ದೂರು, ತನಿಖೆ