ಎಎಸ್ಐ ಬೈಕ್ ಕದ್ದು ಪರಾರಿ: ಶಿವಮೊಗ್ಗದಲ್ಲಿ ನಡೆದ ಪ್ರಕರಣದ ಸಿಸಿಟಿವಿ ದೃಶ್ಯ - Etv Bharat Kannada
🎬 Watch Now: Feature Video
ಶಿವಮೊಗ್ಗ: ಬೈಕ್ ಕಳ್ಳನೋರ್ವ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್ಐ)ಬೈಕ್ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಗೋಪಾಲಗೌಡ ಬಡಾವಣೆಯ ನಿವಾಸಿ ಹಾಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಎಂಬುವರ ಬೈಕ್ ಕಳ್ಳತನವಾಗಿದೆ. ಫೆ.1 ರಂದು ರಾತ್ರಿ ಸುಮಾರು 11:50 ರ ವೇಳೆಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದಿಯಲು ಕಳ್ಳ ಯತ್ನಿಸುತ್ತಾನೆ. ಅದು ಸಾಧ್ಯವಾಗದೇ ಇದ್ದಾಗ ಸ್ವಲ್ಪ ದೂರ ತೆರಳಿ ಎಎಸ್ಐ ಅವರ ಹೀರೊ ಹೊಂಡಾ ಸ್ಪ್ಲೆಂಡರ್ ವಾಹನವನ್ನು ನಕಲಿ ಕೀ ಬಳಸಿ ಕದ್ದು ಪರಾರಿಯಾಗಿದ್ದಾನೆ. ಮರುದಿನ ಬೆಳಗ್ಗೆ ಉಮೇಶ್ ಅವರು ಕೆಲಸಕ್ಕೆಂದು ತೆರಳುವಾಗ ಬೈಕ್ ಕಾಣೆಯಾಗಿದ್ದು ಗೊತ್ತಾಗಿದೆ. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ನಲ್ಲಿ ರಸ್ತೆ ಶೋಧಿಸುವಾಗ ಅಪಘಾತ : ಬೈಕ್‌ಗೆ ಲಾರಿ ಗುದ್ದಿ ಯುವತಿ ಸ್ಥಳದಲ್ಲೇ ಸಾವು