ರಿಲ್ಯಾಕ್ಸ್ ಮೂಡ್ನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್...
🎬 Watch Now: Feature Video
ಹಾವೇರಿ: ಕಳೆದ ಒಂದು ತಿಂಗಳಿಂದ ವಿಧಾನಸಭೆ ಚುನಾವಣೆ ಜಂಜಾಟದಲ್ಲಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ಗುರುವಾರ ಮನೆಯ ಸದಸ್ಯರೊಂದಿಗೆ ಕೆಲಕಾಲ ಸಮಯ ಕಳೆದರು. ಇಷ್ಟುದಿನ ಚುನಾವಣಾ ಪ್ರಚಾರದ ಹಿನ್ನೆಲೆ ಕ್ಷೇತ್ರದ ಸಂಚಾರಕ್ಕೆ ಹೆಚ್ಚು ಸಮಯ ನೀಡಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ ಗುರುವಾರ ಕೊಂಚ ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದರು. ಹಿರೇಕೆರೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮೊಮ್ಮಗಳು ಸಾನ್ವಿಯೊಂದಿಗೆ ಖುಷಿಯ ಕ್ಷಣಗಳನ್ನು ಕಳೆದರು. ಬಿ.ಸಿ.ಪಾಟೀಲ್ ಮೊಮ್ಮಗಳನ್ನು ಎತ್ತಿಕೊಂಡು ಮುದ್ದಾಡಿದರು. ತಮ್ಮ ಕಿರಿಯ ಮಗಳು ಸೃಷ್ಟಿಯ ಮಗಳಾದ ಸಾನ್ವಿಯ ಜೊತೆಗೆ ಬಿ.ಸಿ. ಪಾಟೀಲ್ ಕೆಲ ಹೊತ್ತು ಕಳೆದರು.
ಇದನ್ನೂ ಓದಿ: ರಿಲಾಕ್ಸ್ ಮೂಡ್ನಲ್ಲಿ ನಾಯಕರು, ಆಪ್ತರೊಂದಿಗೆ ಚಹಾಕೂಟ : 141 ಸ್ಥಾನ ಗೆಲ್ಲುತ್ತೇವೆ ಎಂದ ಡಿಕೆಶಿ
ಕಳೆದ ಒಂದು ತಿಂಗಳಿಂದ ಕ್ಷೇತ್ರದ ಗ್ರಾಮಗಳ ಸಂಚಾರ, ರೋಡ್ ಶೋ, ನಾಮಪತ್ರ ಸಲ್ಲಿಕೆ ಮತ್ತು ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿ.ಸಿ. ಪಾಟೀಲ್ ಅವರು, ಇವತ್ತು ಎಲ್ಲಾ ರಾಜಕೀಯ ಜಂಜಾಟಗಳನ್ನು ಮರೆತು ಮೊಮ್ಮಗಳು ಸೇರಿದಂತೆ ಸಂಬಂಧಿಕರ ಜೊತೆಗೆ ಹೊತ್ತು ಕಳೆದರು.
ಇದನ್ನೂ ಓದಿ: ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿಗೆ 115 ಸ್ಥಾನ ಬರುತ್ತೆ: ಬಿಎಸ್ವೈ ವಿಶ್ವಾಸ