ಸಾವಿರಾರು ಜನರ ಅಶ್ರುತರ್ಪಣ, ಸಕಲ ಸೇನಾ ಗೌರವಗಳೊಂದಿಗೆ 'ಅಗ್ನಿವೀರ'ನ ಅಂತ್ಯಕ್ರಿಯೆ-ವಿಡಿಯೋ - Agniveer Akshay Gavate cremation
🎬 Watch Now: Feature Video
Published : Oct 23, 2023, 5:32 PM IST
ಮಹಾರಾಷ್ಟ್ರ (ಬುಲ್ಧಾನ್): ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಕಾರ್ಯಾಚರಣೆಯ ವೇಳೆ ಮೃತಪಟ್ಟಿದ್ದ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್ ಗವಟೆ ಅವರ ಅಂತ್ಯಕ್ರಿಯೆ ಸೋಮವಾರ ಅವರ ಹುಟ್ಟೂರಾದ ಬುಲ್ಧಾನ್ ಜಿಲ್ಲೆಯ ಪಿಂಪಲ್ಗಾಂವ್ ಸರಾಯ್ ಗ್ರಾಮದಲ್ಲಿ ನೆರವೇರಿತು. ಸಕಲ ಸೇನಾ ಗೌರವಗೊಂದಿಗೆ ಅಕ್ಷಯ್‌ಗೆ ಅಂತಿಮ ವಿದಾಯ ಹೇಳಲಾಯಿತು.
ಮುಂಬೈ ವಿಮಾನದ ನಿಲ್ದಾಣದ ಮೂಲಕ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಯಿತು. ಗ್ರಾಮದಲ್ಲಿ ಮೆರವಣಿಗೆ ನಡೆಸಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಸಾಲುಸಾಲಾಗಿ ಬಂದ ಗ್ರಾಮಸ್ಥರು, ವಿದ್ಯಾರ್ಥಿಗಳು, ಸ್ನೇಹಿತರು ರಸ್ತೆಗಳ ಇಕ್ಕೆಲಗಳಲ್ಲಿ ನಿಂತು, ರಂಗೋಲಿ ಬಿಡಿಸಿ, ಪಾರ್ಥಿವ ಶರೀರಕ್ಕೆ ಅಂತಿಮ ಸೆಲ್ಯೂಟ್ ಮಾಡಿದರು. ಅಕ್ಷಯ್ ಅವರನ್ನು ಕಳೆದುಕೊಂಡ ಪೋಷಕರು, ಸ್ನೇಹಿತರು ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲಕುತ್ತಿತ್ತು.
ಅಗ್ನಿವೀರ್ ಅಕ್ಷಯ್ ಗವಟೆ ಅವರಿಗೆ ಭಾರತೀಯ ಸೇನೆ ಗೌರವ ನಮನ ಸಲ್ಲಿಸಿ ಬೀಳ್ಕೊಟ್ಟಿತ್ತು. ಸೇನೆಯ ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್ ಅಕ್ಷಯ್ ಕುಟುಂಬಕ್ಕೆ ಸಂತಾಪ ಸೂಚಿಸಿದೆ.
ಇದನ್ನೂ ಓದಿ: ಸಿಯಾಚಿನ್ನಲ್ಲಿ ಅಗ್ನಿವೀರ್ ಅಕ್ಷಯ್ ಹುತಾತ್ಮ: ಭಾರತೀಯ ಸೇನೆಯಿಂದ ಗೌರವ ಸಲ್ಲಿಕೆ