ಕೊರಗಜ್ಜನೇ ನನ್ನನ್ನ ಇಲ್ಲಿಗೆ 3 ತಿಂಗಳಿಗೊಮ್ಮೆ ಕರೆಸಿಕೊಳ್ಳುತ್ತಾರೆ: ನಟಿ ರಕ್ಷಿತಾ ಪ್ರೇಮ್ - ಕುತ್ತಾರು ಕೊರಗಜ್ಜನ ಆದಿಸ್ಥಳ
🎬 Watch Now: Feature Video
Published : Sep 2, 2023, 12:14 PM IST
|Updated : Sep 2, 2023, 12:26 PM IST
ಮಂಗಳೂರು: ಕುತ್ತಾರು ಕೊರಗಜ್ಜನ ಆದಿಸ್ಥಳ, ಭಂಡಾರ ಬೈಲು ಪಂಜಂದಾಯ, ಬಂಟ, ವೈದ್ಯನಾಥ ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬಂದೆ ಬರುತ್ತೇನೆ ಎಂದು ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಹೇಳಿದರು. ಶುಕ್ರವಾರ ಅವರು ಕುತ್ತಾರಿನ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕುತ್ತಾರು ಭಂಡಾರ ಬೈಲಿನ ಪಂಜಂದಾಯ, ಬಂಟ ಹಾಗೂ ವೈದ್ಯನಾಥ ದೈವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ರಕ್ಷಿತಾ 'ಕುತ್ತಾರಿನ ಕೊರಗಜ್ಜ ಮತ್ತು ಪಂಜಂದಾಯ, ಬಂಟ ಕ್ಷೇತ್ರದ ಕಾರಣೀಕ ಹೇಳಲು ಅಸಾಧ್ಯ. ಕೊರಗಜ್ಜನೆ ಇಲ್ಲಿಗೆ ಮೂರು ತಿಂಗಳಿಗೊಮ್ಮೆ ನನ್ನನ್ನ ಕರೆಸಿಕೊಳ್ಳುತ್ತಾರೆ ಎಂದುಕೊಂಡಿದ್ದೇನೆ. ವಿಶೇಷವಾಗಿ ಭಂಡಾರ ಬೈಲಿನ ಪಂಜಂದಾಯ ದೈವದ ಕ್ಷೇತ್ರ ಪ್ರಶಾಂತವಾಗಿದ್ದು, ಮನಸಿಗೆ ನೆಮ್ಮದಿ ಕೊಡುತ್ತದೆ. ಹಾಗಾಗಿ ಕುತ್ತಾರಿಗೆ ಭೇಟಿ ನೀಡಿದಾಗ ಪಂಜಂದಾಯ ಕ್ಷೇತ್ರದಲ್ಲಿ ಕುಳಿತು ಹೋಗುತ್ತೇನೆ. ಹೆಚ್ಚಿನ ಬೇಡಿಕೆ ಏನೂ ಇಡಲ್ಲ, ಎಲ್ಲವನ್ನೂ ಕೊಟ್ಟ ದೈವ, ದೇವತೆಗಳು ನನ್ನ ಕೈಬಿಡದಂತೆ ಪ್ರಾರ್ಥಿಸುತ್ತೇನೆ. ಇಲ್ಲಿಂದ ಪ್ರತಿ ಬಾರಿ ಕಟೀಲು, ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವ ವಾಡಿಕೆ ಬೆಳೆಸಿಕೊಂಡಿದ್ದೇನೆ' ಎಂದರು. ನೆಚ್ಚಿನ ನಟಿಯನ್ನ ಕಂಡ ಸ್ಥಳೀಯರು ಅವರ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟಿ ರಕ್ಷಿತಾ ಪ್ರೇಮ್