ಶಿಡ್ಲಘಟ್ಟದಲ್ಲಿ ಕಾಲ್ನಡಿಗೆ ಮೂಲಕ ಬಿಜೆಪಿ ಅಭ್ಯರ್ಥಿ ಪರ ಕಿಚ್ಚ ಮತಯಾಚನೆ - election news

🎬 Watch Now: Feature Video

thumbnail

By

Published : May 6, 2023, 9:06 PM IST

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಪರವಾಗಿ ಶನಿವಾರ ಕಿಚ್ಚ ಸುದೀಪ್ ಅವರು ಮತಯಾಚನೆ ನಡೆಸಿದರು. ಮಧ್ಯಾಹ್ನ 3:00 ಗಂಟೆಗೆ ಆರಂಭವಾದ ರೋಡ್ ಶೋ, ಬಿಜೆಪಿ ಕಚೇರಿ ಸೇವಾಸೌಧದಿಂದ ಬಸ್ ನಿಲ್ದಾಣದವರೆಗೂ ಚಲಿಸಿತು. ಮಧ್ಯದಲ್ಲಿ ಪ್ರಚಾರ ವಾಹನದಿಂದ ಕೆಳಗಿಳಿದ ಸುದೀಪ್ ಅವರು ಕಾಲ್ನಡಿಗೆಯಲ್ಲಿ ಸೀಕಲ್ ರಾಮಚಂದ್ರಗೌಡರ ಕೈ ಹಿಡಿದು 1 ಕಿ.ಮೀ ವರೆಗೂ ಪಾದಯಾತ್ರೆ ನಡೆಸಿದರು. 

ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ರೋಡ್​ ಶೋನಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ಕಿಚ್ಚ ಸುದೀಪ್ ಸೀಕಲ್ ರಾಮಚಂದ್ರಗೌಡರು ನನ್ನ ಹಳೆ ಪರಿಚಯಸ್ಥರು. ಬಹಳ ಒಳ್ಳೆಯವರು. ವಿದ್ಯಾವಂತರು ಹಾಗು ಬುದ್ಧಿವಂತರು. ಹಣ ಮಾಡೋಕೆ ಅವರು ರಾಜಕೀಯಕ್ಕೆ ಬಂದಿಲ್ಲ. ಅದು ಅವರ ಬಳಿ ಸಾಕಷ್ಟು ಇದೆ. ನಿಮ್ಮ ಸೇವೆ ಮಾಡೋಕೆ ಬಂದಿದ್ದಾರೆ ಎಂದರು. 

ಕಾಲ್ನಡಿಗೆಯಲ್ಲಿ ನಡೆಯುವಾಗ ನೆರೆದಿದ್ದ ಅಭಿಮಾನಿಗಳಿಗೆ ಕೈ ಬೀಸಿ, ನಮಸ್ಕಾರ ಮಾಡಿ ಅವರ ಜೊತೆಯಲ್ಲಿಯೇ ರಾಮಚಂದ್ರಗೌಡರನ್ನು ಕೈ ಹಿಡಿದು ನಡೆದುಕೊಂಡು ಬಂದರು. ಪಟಾಕಿ ಸಿಡಿಸಿ, ತಮಟೆ ಡೋಲು ಬಾರಿಸಿ, ಜಯಘೋಷಗಳೊಂದಿಗೆ ಕಿಚ್ಚ ಸುದೀಪ್ ಅವರನ್ನು ಅಭಿಮಾನಿಗಳು ಸ್ವಾಗತಿಸಿದರು. ನೆರೆದಿದ್ದ ಅಭಿಮಾನಿಗಳು ಸುದೀಪ್ ಅವರಿಗೆ ಒಂದು ಡೈಲಾಗ್ ಹೇಳುವಂತೆ ಕೇಳಿದಾಗ ವೀರ ಮದಕರಿ ಸಿನಿಮಾ ಸಂಭಾಷಣೆ ಹೇಳಿ ಅಭಿಮಾನಿಗಳನ್ನು ರಂಜಿಸಿದರು.

ಮಾಜಿ ಶಾಸಕರಾದ ಎಂ.ರಾಜಣ್ಣ, ಕೋಲಾರದ ಸಂಸದರಾದ ಮುನಿಸ್ವಾಮಿ, ಛಲವಾದಿ ನಾರಾಯಣ ಸ್ವಾಮಿ, ಚಕ್ರವರ್ತಿ ಚಂದ್ರಚೂಡ್, ಜಿಲ್ಲಾ ಕಾರ್ಯದರ್ಶಿ ನಂದೀಶ್ ಮತ್ತು ಕಬ್ಜ ನಿರ್ದೇಶಕ ಆರ್.ಚಂದ್ರು ರೋಡ್​ ಶೋನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಅಪ್ಪನಿಗೆ ಮಗಳೇ ಸ್ಟಾರ್ ಪ್ರಚಾರಕಿ: ವಾಟಾಳ್ ಪರ ರೋಡ್ ಶೋ ನಡೆಸಿದ ಅನುಪಮಾ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.