ಅಜ್ಜಿ, ವಿಶೇಷಚೇತನ ಸಹೋದರಿ ಜೊತೆಗೆ ಬಂದು ಸ್ವಗ್ರಾಮದಲ್ಲಿ ಹಕ್ಕು ಚಲಾಯಿಸಿದ ನಟ ಡಾಲಿ ಧನಂಜಯ್ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18470622-thumbnail-16x9-yyy.jpg)
ಅರಸೀಕೆರೆ (ಹಾಸನ) : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಸ್ಯಾಂಡಲ್ ವುಡ್ ನಟ ನಟಿಯರು ಮತದಾನ ಮಾಡಿದರು. ಇದರ ಜೊತೆಗೆ ಸ್ಯಾಂಡಲ್ ವುಡ್ ಖ್ಯಾತ ನಟ ಡಾಲಿ ಧನಂಜಯ್ ತಮ್ಮ ಹುಟ್ಟೂರಾದ ಕಾಳೇನಹಳ್ಳಿ ಹಟ್ಟಿಯಲ್ಲಿ ಮತದಾನ ಮಾಡಿದರು. ಅಜ್ಜಿ ಮಲ್ಲಮ್ಮ, ಸಹೋದರ ಗಿರೀಶ ಹಾಗೂ ಸಹೋದರಿ ರಾಣಿಯೊಂದಿಗೆ ಆಗಮಿಸಿದ ಧನಂಜಯ್ ಮತಗಟ್ಟೆ ಸಂಖ್ಯೆ 217ರಲ್ಲಿ ಮತ ಚಲಾಯಿಸಿದರು.
ಇದರ ಜೊತೆಗೆ ಇತರ ಸ್ಯಾಂಡಲ್ವುಡ್ ನಟ ನಟಿಯರು ಮತದಾನ ಮಾಡಿದರು. ಬ್ಯಾಟರಾಯನಪುರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ ಮತದಾನ ಮಾಡಿದರು. ವಿಜಯನಗರದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ ರಕ್ಷಿತಾ ದಂಪತಿ ಮತದಾನ ಮಾಡಿದ್ದು, ಬೆಂಗಳೂರಿನಲ್ಲಿ ನಟ ಯಶ್ ಮತದಾನ ಮಾಡಿದ್ರು.
ಅಲ್ಲದೆ ದುನಿಯಾ ವಿಜಯ್, ಸಾಧು ಕೋಕಿಲ, ಸಪ್ತಮಿ ಗೌಡ, ಹರ್ಷಿಕಾ ಪೂಣಚ್ಚ, ನೆನಪಿರಲಿ ಪ್ರೇಮ್, ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಮಾಳವಿಕಾ ಅವಿನಾಶ್, ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಮತ್ತಿತರು ಮತದಾನ ಮಾಡಿದರು. ರಾಜ್ಯ ವಿಧಾನಸಭಾ ಚುನಾವಣೆ ಇಂದು ಮುಕ್ತಾಯಗೊಂಡಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮೇ 13ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ : ಚುನಾವಣೆ 2023: ಮತ ಚಲಾಯಿಸಿದ ಕನ್ನಡ ತಾರೆಯರು