ಮನೆ ಬಾಗಿಲು ಮೀಟಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು - ಚಿನ್ನಾಭರಣ ಕಳವು
🎬 Watch Now: Feature Video
Published : Jan 15, 2024, 6:35 PM IST
ಮೈಸೂರು: ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಖತರ್ನಾಕ್ ಕಳ್ಳನೊಬ್ಬ ಮನೆ ಬಾಗಿಲು ಮೀಟಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದಿರುವ ಘಟನೆ ನಂಜನಗೂಡು ಪಟ್ಟಣದ ಕೆಂಪೇಗೌಡ ಲೇಔಟ್ನಲ್ಲಿ ನಡೆದಿದೆ.
ನಂಜನಗೂಡಿನ ಹೆಸರಾಂತ ಸುರುಚಿ ಉಪ್ಪಿನಕಾಯಿ ಮಾಲೀಕ ವಿಶ್ವಚೇತನ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಪಟ್ಟಣದ ಕೆಂಪೇಗೌಡ ಬಡಾವಣೆಯ 3ನೇ ಕ್ರಾಸ್ನಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ವಿಶ್ವಚೇತನ್ ಹಾಗೂ ಕುಟುಂಬದವರು ವಾರಾಂತ್ಯ ಮಕ್ಕಳಿಗೆ ಶಾಲಾ ರಜೆ ಇದ್ದ ಕಾರಣ, ಮನೆಗೆ ಬೀಗ ಹಾಕಿ, ತಮ್ಮ ಫ್ಯಾಕ್ಟರಿ ಮನೆಗೆ ಹೋಗಿದ್ದರು ಎಂಬುದಾಗಿ ತಿಳಿದು ಬಂದಿದೆ.
ಹಾಗಾಗಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿರುವ ಕಳ್ಳ ತನ್ನ ಕೈಚಳಕ ತೋರಿ, ಮನೆ ಬಾಗಿಲು ಮೀಟಿ ಒಳಗೆ ನುಗ್ಗಿ ಬೀರುವಿನಲ್ಲಿದ್ದ ಸುಮಾರು 200 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ. ವಿಷಯ ತಿಳಿದು ನಂಜನಗೂಡು ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು, ಶಿವಣ್ಣ ಸೇರಿದಂತೆ ಸಿಬ್ಬಂದಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕದ್ದ ಕಳ್ಳ- ಸಿಸಿಟಿವಿ ದೃಶ್ಯ