thumbnail

By

Published : Feb 26, 2023, 7:21 PM IST

ETV Bharat / Videos

ಡಿಜೆ ಸೌಂಡ್​ಗೆ ಡ್ಯಾನ್ಸ್.. ನೋಡನೋಡುತ್ತಲೇ ಕುಸಿದು ಬಿದ್ದು ಯುವಕ ಸಾವು- ವಿಡಿಯೋ

ನಾಂದೇಡ್ : ಮನುಷ್ಯ ಎಷ್ಟೆಲ್ಲಾ ಬೆಳೆದರೂ, ಏನೆಲ್ಲ ಸಾಧಿಸಿದರೂ ಸಾವು ಎಂಬ ಎರಡಕ್ಷರದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೃತ್ಯು ಎಂಬುದು ಯಾರಿಗೆ, ಯವಾಗ ಬರುತ್ತದೆ ಎಂದು ಹೇಳುವುದು ಕಷ್ಟ. ಇದೀಗ ಮದುವೆಯ ಆರತಕ್ಷತೆ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಡಿಜೆ ಸೌಂಡ್​ಗೆ ಸಕತ್​ ಆಗಿ ಡ್ಯಾನ್ಸ್​ ಮಾಡುತ್ತಿದ್ದ 19 ವರ್ಷದ ಯುವಕನೊಬ್ಬ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದು, ದಿಢೀರ್​ ಸಾವನ್ನಪ್ಪಿದ ಘಟನೆ ನಡೆದಿದೆ.  

ಹೌದು, ನಾಂದೇಡ್‌ನ ಕಿನ್ವಾಟ್ ತಾಲೂಕಿನ ಶಿವಾನಿ ಎಂಬ ಗಾಮದ ಯುವಕ ಮುತ್ತಣ್ಣ ಜಮಗೆವಾಡ್ ಎನ್ನುವವನು ತೆಲಂಗಾಣದ ಪಾರ್ಡಿಯಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನು. ಫೆಬ್ರವರಿ 25ರ ತಡರಾತ್ರಿ ನಡೆದ ಆರತಕ್ಷತೆ ಸಮಾರಂಭದಲ್ಲಿ ತೆಲುಗು ಚಿತ್ರವೊಂದರ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾನೆ. ಆದ್ರೆ, ಡ್ಯಾನ್ಸ್​ ಮಾಡುತ್ತಿದ್ದಂತೆ ಹಠಾತ್ತನೆ ಹೃದಯಸ್ತಂಭನವಾಗಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಮುತ್ತಣ್ಣನ ಡ್ಯಾನ್ಸ್​ ಮಾಡುತ್ತ ಸಾವಿಗೀಡಾದ ಘಟನೆಯ ವಿಡಿಯೋ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  

ಇದನ್ನೂ ಓದಿ: ರೋಸ್​ ಸಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಲೇ ಕುಸಿದು ಬಿದ್ದು ಮೃತಪಟ್ಟ ಯುವತಿ!-ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.