ಲಂಡನ್ನಲ್ಲಿ ಎಂಎಸ್ ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶಿಸಿದ ವಿದ್ಯಾರ್ಥಿ.. ವಿಡಿಯೋ ವೈರಲ್ - ಲಂಡನ್ನಲ್ಲಿ ಕನ್ನಡ ಧ್ವಜ ಪ್ರದರ್ಶಿಸಿದ ವಿದ್ಯಾರ್ಥಿ
🎬 Watch Now: Feature Video
ಲಂಡನ್: ಬ್ರಿಟನ್‌ನ ಲಂಡನ್ನಲ್ಲಿ ಕರ್ನಾಟಕದ ಮೂಲದ ವಿದ್ಯಾರ್ಥಿಯೋರ್ವ ತನ್ನ ಎಂಎಸ್ ಪದವಿ ಸ್ವೀಕಾರ ಸಮಾರಂಭದಲ್ಲಿ ಕನ್ನಡ ಧ್ವಜ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಟಿ ಯೂನಿವರ್ಸಿಟಿ ಆಫ್ ಲಂಡನ್ನ ಬೇಯೆಸ್ ಬ್ಯುಸಿನೆಸ್ ಸ್ಕೂಲ್ (ಕ್ಯಾಸ್)ನ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಅಧೀಶ್ ಆರ್. ವಾಲಿ ಎಂಬ ಯುವಕ ಎಂಎಸ್ ಪದವಿ ಪೂರೈಸಿದ್ದು, ಪದವಿ ಸ್ವೀಕರಿಸಲು ಬಂದಾಗ ತಮ್ಮ ಜೇಬಿನಲ್ಲಿದ್ದ ಕನ್ನಡ ಧ್ವಜವನ್ನು ತೆಗೆದು ಎಲ್ಲರ ಎದುರು ಪ್ರದರ್ಶಿಸಿದ್ದಾರೆ.
ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅಧೀಶ್ ಹಂಚಿಕೊಂಡಿದ್ದು, ಬ್ರಿಟನ್‌ನಲ್ಲಿ ನಡೆದ ಸಮಾರಂಭದಲ್ಲಿ ನಾನು ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದೊಂದಿಗೆ ಕರ್ನಾಟಕ, ಬೀದರ್, ಕನ್ನಡ, ಕನ್ನಡಿಗ, ಲಂಡನ್, ಯುಕೆ, ಇಂಗ್ಲೆಂಡ್ ಮತ್ತು ಬೀದರ್ಅಪ್ಡೇಟ್ಸ್ ಎಂಬ ಹ್ಯಾಷ್ ಟ್ಯಾಗ್ಗಳನ್ನೂ ಅಧೀಶ್ ಬಳಕೆ ಮಾಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ 23 ಅಡಿ ಎತ್ತರದ ಡಾ.ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ