Watch.. ಚಳಿಯಿಂದ ರಕ್ಷಿಸಿಕೊಳ್ಳಲು ವಾಹನದ ಹಿಂಬದಿ ಒಲೆ ಅಳವಡಿಸಿದ ಯುವಕ.. ಇಲ್ಲಿದೇ ವಿಡಿಯೋ - ಮೈಕೊರೆಯುವಂತಹ ಚಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17536699-thumbnail-3x2-vny.jpg)
ಇಂದೋರ್ (ಮಧ್ಯಪ್ರದೇಶ): ಜಿಲ್ಲೆಯಲ್ಲಿ ಚಳಿಯ ಪ್ರಮಾಣ ಏರಿಕೆಯಾಗಿರುವ ಕಾರಣ ಜನರು ಮನೆ ಬಿಟ್ಟು ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಸಂಜೆ ಸಮಯದಲ್ಲಿ ಮೈಕೊರೆಯುವಂತಹ ಚಳಿ ಇರಲಿದ್ದು, ಜನರು ಹೊರ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಇಲ್ಲೊಬ್ಬ ಯುವಕ ವಾಹನದ ಮೇಲೆ ಸವಾರಿ ಮಾಡಿದರೂ ಚಳಿ ತಾಕದೇ ಇರುವಂತಹ ಉಪಾಯವೊಂದನ್ನು ಕಂಡುಕೊಂಡಿದ್ದು, ವಾಹನದ ಹಿಂಬದಿಯಲ್ಲಿ ಒಲೆ ಅಳವಡಿಸಿದ್ದು, ಕೈಗಳನ್ನು ಕಾಯಿಸಿಕೊಳ್ಳುವ ಮೂಲಕ ಚಳಿಯಿಂದ ರಕ್ಷಣೆ ಪಡೆಯುತ್ತಿದ್ದಾನೆ. ಸದ್ಯ ಯುವಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೇ ಯುವಕನ ಈ ಉಪಾಯಕ್ಕೆ ಪೊಲೀಸರು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಫಿದಾ ಆಗಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದ ಕುಲ್ಲೂದಲ್ಲಿ ಭಾರಿ ಹಿಮಪಾತ ಶುರು: ಪ್ರವಾಸೋದ್ಯಮ ವ್ಯಾಪಾರ ಜೋರು