ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರ; ಬೈಕ್ ಸಮೇತ ಗುಂಡಿಗೆ ಬಿದ್ದ ಸವಾರ - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Dec 25, 2023, 9:30 PM IST
ಮಂಗಳೂರು(ದಕ್ಷಿಣ ಕನ್ನಡ): ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರಕ್ಕೆ ನೀರು ತುಂಬಿದ ಗುಂಡಿಗೆ ಬೈಕ್ ಸಮೇತ ಸವಾರ ಬಿದ್ದು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಕೆ.ಎಸ್.ರಾವ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಆ ಸಲುವಾಗಿ ಭೂಗತ ಕೇಬಲ್ ಹಾಗೂ ಪೈಪ್ ಲೈನ್ಗಾಗಿ ಹೊಂಡ ತೆಗೆಯಲಾಗಿತ್ತು. ಕಾಮಗಾರಿ ನಡೆದ ಬಳಿಕ ಹೊಂಡ ಮುಚ್ಚದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ಇದರಲ್ಲಿ ನೀರು ತುಂಬಿತ್ತು. ಈ ನೀರು ತುಂಬಿದ ಹೊಂಡಕ್ಕೆ ಬೈಕ್ ಸವಾರರೊಬ್ಬರು ಬೈಕ್ ಸಮೇತ ಬಿದ್ದು ಗಾಯಗೊಂಡಿದ್ದಾರೆ.
ಬೈಕ್ ಸಂಪೂರ್ಣ ನೀರಲ್ಲಿ ಮುಳುಗಿದ್ದು ಸವಾರ ಮೇಲೆ ಬರಲಾಗದೆ ಪರದಾಟ ನಡೆಸಿದ್ದರು. ಬಳಿಕ ಸ್ಥಳೀಯರು ಸೇರಿ ಯುವಕನನ್ನು ಮೇಲಕ್ಕೆತ್ತಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಜನನಿಬಿಡ ರಸ್ತೆಯಲ್ಲೇ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡೇ ಹೊಂಡ ತೆಗೆದು ತಡೆ ಕೂಡಾ ನಿರ್ಮಿಸದೆ ಬೇಜವಾಬ್ದಾರಿ ಮೆರೆದ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಳಕಳಿ ಮೆರೆದ ಪೊಲೀಸರು