ಕ್ಲಬ್ ಚುನಾವಣೆಗೆ ಬಂದಿದ್ದ ಪೊಲೀಸ್ ಅಧಿಕಾರಿಯ ಬೈಕ್ ಎಗರಿಸಿದ ಖದೀಮರು - ಬೈಕ್ ಕಳೆದುಕೊಂಡ ಪೊಲೀಸ್ ಅಧಿಕಾರಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17308398-thumbnail-3x2-ran.jpg)
ಲೂಧಿಯಾನ (ಪಂಜಾಬ್): ಪೊಲೀಸ್ ಅಧಿಕಾರಿಯ ಬೈಕ್ಅನ್ನೇ ಕಳ್ಳತನ ಮಾಡಿರುವ ಘಟನೆ ಪಂಜಾಬ್ನ ಲೂಧಿಯಾನದಲ್ಲಿ ನಡೆದಿದೆ. ಇಲ್ಲಿನ ಸಟ್ಲೆಜ್ ಕ್ಲಬ್‌ನ ಚುನಾವಣಾ ಕರ್ತವ್ಯಕ್ಕಾಗಿ ಎಎಸ್‌ಐ ಗುರುದೇವ್ ಸಿಂಗ್ ನಿಯೋಜನೆಗೊಂಡಿದ್ದರು. ತಮ್ಮ ಬೈಕ್ನಲ್ಲಿ ಬಂದಿದ್ದ ಗುರುದೇವ್ ಹೊರಗಡೆ ಬೈಕ್ ನಿಲ್ಲಿಸಿ ಹೋಗಿದ್ದರು. ಆದರೆ, ಕರ್ತವ್ಯ ನಿರ್ವಹಿಸಿ ಹೊರ ಬಂದು ನೋಡುವಷ್ಟರಲ್ಲಿ ಬೈಕ್ ಮಾಯವಾಗಿತ್ತು. ಬೈಕ್‌ಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಇದರಿಂದ ಬೈಕ್ ಕಳ್ಳತನದ ಬಗ್ಗೆ ಎಎಸ್‌ಐ ತಮ್ಮದೇ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Last Updated : Feb 3, 2023, 8:37 PM IST