ಕುಡಿಯುವ ನೀರಿಗಾಗಿ 17 ವರ್ಷ ಪಾದರಕ್ಷೆ ಧರಿಸದೇ ಹೋರಾಟ: ಚಪ್ಪಲಿ ತೊಡಿಸಿದ ಶಾಸಕ, ಸನ್ಮಾನಿಸಿದ ಸಿಎಂ - ಈಟಿವಿ ಭಾರತ ಕನ್ನಡ
🎬 Watch Now: Feature Video
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿಗಾಗಿ ನಿರಂತರ ಹೋರಾಟ ನಡೆಸಿದ್ದ ಸಂದರ್ಭದಲ್ಲಿ, ನಮ್ಮ ಜನರಿಗೆ ನೀರು ಸಿಗುವ ತನಕ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿ 17 ವರ್ಷಗಳ ಕಾಲ ಚಪ್ಪಲಿ ಧರಿಸದೆ ಬರಿಗಾಲಲ್ಲೇ ತಿರುಗಾಡುತ್ತಿದ್ದ 'ಬರಿಗಾಲ ಬಸಯ್ಯ' ಎಂದೇ ಕರೆಸಿಕೊಳ್ಳುತ್ತಿದ್ದ ಬಸವರಾಜ ನಂದಿಕೇಶ್ವರಮಠ ಅವರನ್ನು ನಾಲತವಾಡದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಶಯದ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದ್ದಾರೆ. ಈ ವೇಳೆ ಶಾಸಕರು ಬಸವರಾಜ ಅವರಿಗೆ ಚಪ್ಪಲಿ ತೊಡಿಸಿದರು. ಮುಖ್ಯಮಂತ್ರಿ ಮತ್ತು ಶಾಸಕರು ತಮ್ಮ ಭಾಷಣದಲ್ಲಿ ಬಸವರಾಜ ಅವರು ನೀರಿಗಾಗಿ ನಡೆಸಿದ ಹೋರಾಟವನ್ನು ಶ್ಲಾಘಿಸಿದರು.
2004ರಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು ಕೃಷ್ಣಾ ನದಿಯಿಂದ ನೀರು ತರುವ ಎರಡನೇ ಹಂತದ ಯೋಜನೆಗೆ ಸಾಕಷ್ಟು ಹೋರಾಟ ನಡೆದಿತ್ತು. 32ನೇ ದಿನದ ಹೋರಾಟದ ಸ್ಥಳಕ್ಕೆ ಆಗಿನ ಶಾಸಕರಾಗಿದ್ದ ಸಿ.ಎಸ್.ನಾಡಗೌಡ ಆಗಮಿಸಿ ಹೋರಾಟ ಕೈಬಿಡಿ, ಒಂದೂವರೆ ತಿಂಗಳಲ್ಲಿ ನೀರು ತರುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದರು. ನೀರು ತರುವವರೆಗೂ ಪಾದರಕ್ಷೆ ಧರಿಸದೇ ಬರಿಗಾಲಲ್ಲಿ ತಿರುಗಾಡುತ್ತೇನೆ ಎಂದು ನಂದಿಕೇಶ್ವರಮಠ ಸಂಕಲ್ಪ ಮಾಡಿದ್ದರು.
ಇದನ್ನೂ ಓದಿ: ಮಾದಪ್ಪನ ಬೆಟ್ಟಕ್ಕೆ ಭಕ್ತರ ದಂಡು: ಯುಗಾದಿ ರಥೋತ್ಸವಕ್ಕೆ ಭರದ ಸಿದ್ಧತೆ