ಮಗಳ ಹುಟ್ಟುಹಬ್ಬಕ್ಕೆ ಉಚಿತವಾಗಿ 4 ಕ್ವಿಂಟಲ್ ಟೊಮೆಟೊ ಹಂಚಿದ ತಂದೆ: ವಿಡಿಯೋ - tomato
🎬 Watch Now: Feature Video
ಹೈದರಾಬಾದ್ : ದೇಶಾದ್ಯಂತ ಟೊಮೆಟೊ ಬೆಲೆ ಕೈ ಸುಡುತ್ತಿದೆ. ಕೆಲವೆಡೆ ಕೆ.ಜಿ ಟೊಮೆಟೊಗೆ 200 ರೂಪಾಯಿ ಇದೆ. ಹೀಗಾಗಿ, ಸಹಜವಾಗಿಯೇ ಗ್ರಾಹಕರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ರೈತರ ಜಮೀನು, ಅಂಗಡಿಗಳಿಂದ ಟೊಮೆಟೊ ಕಳ್ಳತನತ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಆದರೆ ಇದರ ನಡುವೆ ಇಲ್ಲೊಂದು ಕುತೂಹಲದ ವಿದ್ಯಮಾನ ನಡೆದಿದೆ. ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ತನ್ನ ಮುದ್ದಿನ ಮಗಳ ಹುಟ್ಟುಹಬ್ಬಕ್ಕಾಗಿ 4 ಕ್ವಿಂಟಲ್ ಟೊಮೆಟೊ ಹಂಚಿ ಎಲ್ಲರ ಗಮನ ಸೆಳೆದಿದ್ದಾರೆ.
ಟಿಎಂಆರ್‌ಪಿಎಸ್ ಯುವಸೇನೆಯ ಅಧ್ಯಕ್ಷ ನಲ್ಲ ಶಿವ ಮಾದಿಗ ಎಂಬವರು ಜನರಿಗೆ ನಾಲ್ಕು ಕ್ವಿಂಟಲ್ ಟೊಮೆಟೊ ವಿತರಿಸಿ ವಿನೂತನ ರೀತಿಯಲ್ಲಿ ಮಗಳ ಬರ್ತ್ಡೇ ಆಚರಿಸಿದ್ದಾರೆ. ಹೈದರಾಬಾದ್‌ನ ಪಂಜಗುಟ್ಟ ಪ್ರತಾಪನಗರದ ನಿವಾಸಿಯಾದ ಇವರು, ಬುಧವಾರ 400 ಕೆಜಿ ಟೊಮೆಟೊ ಖರೀದಿಸಿ ನಿವಾಸಿಗಳಿಗೆ ಊಟ, ಹಣ್ಣು ಹಂಪಲುಗಳ ಜೊತೆ ಉಡುಗೊರೆಯಾಗಿ ನೀಡಿದರು. ದುಬಾರಿ ಬೆಲೆಯ ಟೊಮೆಟೊವನ್ನು ಉಚಿತವಾಗಿ ವಿತರಿಸುತ್ತಿರುವ ಸುದ್ದಿ ತಿಳಿದ ನಿವಾಸಿಗಳು ತರಕಾರಿ ತೆಗೆದುಕೊಂಡು ಹೋಗಲು ಧಾವಿಸಿದ್ದರು.
ಇದನ್ನೂ ಓದಿ : ಕೇವಲ ಅರ್ಧ ಎಕರೆ ಜಮೀನು.. ಬರೋಬ್ಬರಿ ₹ 11 ಲಕ್ಷ ಆದಾಯ.. ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್ ಕ್ವೀನ್!