ಕಾಫಿ ಎಸ್ಟೇಟ್ನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆಹಿಡಿದ ಉರಗ ತಜ್ಞ
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಗಿದೆ. ಎನ್. ಆರ್. ಪುರ ತಾಲೂಕಿನ ಕಟ್ಟಿನ ಮನೆಯ ಹೊಸಗದ್ದೆ ಕಾಫಿ ಎಸ್ಟೇಟ್ನಲ್ಲಿ ಹಿಡಿಯಲಾಗಿದ್ದು, ಕಾಳಿಂಗ ಸರ್ಪ ನೋಡಿ ನೆರೆದಿದ್ದ ತೋಟದ ಕಾರ್ಮಿಕರು ಬೆಚ್ಚಿಬಿದ್ದರು. ಬಹುತೇಕರು ಸ್ಥಳದಿಂದ ಪರಾರಿಯಾಗಿದರು. ಕೂಡಲೇ ಉರಗ ತಜ್ಞ ಹರಿಂದ್ರಾಗೆ ತೋಟದ ಮಾಲೀಕ ಹಕೀಬ್ ಕರೆ ಮಾಡಿದರು.
ಸತತ ಒಂದು ಗಂಟೆ ಕಾರ್ಯಾಚರಣೆ ಬಳಿಕ, ಬರೋಬ್ಬರಿ 13 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿಯಲಾಗಿದೆ. ಅದೇ ಸ್ಥಳದಲ್ಲಿ ಸಂಚಾರ ಮಾಡುತ್ತಿದ್ದ ಮತ್ತೊಂದು ಕಾಳಿಂಗ ಸರ್ಪ ಪರಾರಿಯಾಗಿದೆ. ಕಾಳಿಂಗ ಸರ್ಪ ಸೆರೆ ಹಿಡಿದ ಬಳಿಕ ತೋಟದ ಮಾಲಿಕ ಹಾಗೂ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಉರಗ ತಜ್ಞ ಹರಿಂದ್ರ ಅವರು, ಈ ಸರ್ಪವನ್ನು ಹಿಡಿಯುವುದರ ಮೂಲಕ 291ನೇ ಕಾಳಿಂಗ ಸರ್ಪ ಹಿಡಿದಂತಾಗಿದೆ. ಕಾಳಿಂಗ ಸರ್ಪದ ಗಾತ್ರ ನೋಡಿ ಉರಗ ತಜ್ಞ ಸಹ ಒಂದು ಕ್ಷಣ ಬೆಚ್ಚಿಬಿದ್ದರು. ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಎನ್.ಆರ್. ಪುರ ಅರಣ್ಯಕ್ಕೆ ಸರ್ಪವನ್ನು ಬಿಟ್ಟಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಂಭ್ರಮದ ತೆಪ್ಪೋತ್ಸವ.. ಬಾಣ ಬಿರುಸುಗಳ ಚಿತ್ತಾರದ ಮೆರುಗು