ಸಗಣಿ ಬೆಲ್ಲ ನಿಂಬೆ ರಸದಿಂದ ನಿರ್ಮಾಣವಾದ 6 ಕೋಣೆಗಳ ಮನೆ.. ಇಲ್ಲಿದೇ ವಿಡಿಯೋ.. - ಬೆಲ್ಲದ ಮನೆ
🎬 Watch Now: Feature Video
ಮೊಗ (ಪಂಜಾಬ್): ಇಂದಿನ ಕಾಸ್ಟ್ಲಿದುನಿಯಾದಲ್ಲಿ ಮನೆಗಳನ್ನು ಕಟ್ಟುವುದು ಸುಲಭದ ಮಾತಲ್ಲ. ಅದರಲ್ಲೂ ಮನೆ ಕಟ್ಟಿಸಿದರೂ ಒಳ್ಳೆಯ ಗುಣಮಟ್ಟದ ಮನೆಗಳನ್ನೇ ಕಟ್ಟಿಸಬೇಕೆಂಬುದು ಎಲ್ಲರ ಆಸೆಯೂ ಆಗಿರುತ್ತದೆ. ಅದಕ್ಕಾಗಿ ಸಾಲ ಶೂಲ ಮಾಡಿ ಒಳ್ಳೆಯ ಕಂಪನಿಯ ಸಿಮೆಂಟ್, ಗಟ್ಟಿಮುಟ್ಟಾದ ಬ್ರಿಕ್ಸ್ ಸೇರಿದಂತೆ ಹಲವಾರು ರಾಸಾಯನಿಕ ವಸ್ತುಗಳನ್ನು ಬಳಸಿ ಮನೆಗಳನ್ನು ಕಟ್ಟಿಸಕೊಳ್ಳುವುದ ಸರ್ವೇ ಸಾಮಾನ್ಯವಾಗಿದೆ. ಆದರೇ ಇಲ್ಲೊಬ್ಬ ವ್ಯಕ್ತಿ ಇದಕ್ಕೆ ವಿರುದ್ದ ಎನ್ನುವಂತೆ ಶುದ್ಧ ನೈಸರ್ಗಿಕವಾಗಿ ದೊರಯುವ ವಸ್ತಗಳನ್ನು ಬಳಸಿ ಮನೆ ನಿರ್ಮಾಣ ಮಾಡಿದ್ದಾರೆ.
ಹೌದು.. ದಿ ವೆಲ್‌ಬೀಯಿಂಗ್ ಹೆಲ್ತ್ ಆರ್ಗನೈಸೇಶನ್‌ನ ಮುಖ್ಯಸ್ಥರಾಗಿರುವ ಡಾ.ವಿರಿಂದರ್ ಸಿಂಗ್ ಭುಲ್ಲಾರ್ ಎನ್ನುವವರು ಹಸುವಿನ ಸಗಣಿ, ಸುಣ್ಣ, ಜಿಪ್ಸಮ್, ಬೆಲ್ಲ, ನಿಂಬೆ ರಸ ಮತ್ತು ಮೆಂತ್ಯವನ್ನು ಬಳಸಿ ಸುಮಾರು 6 ಕೋಣೆಗಳುಳ್ಳ ಮನೆಯನ್ನು ನಿರ್ಮಾಣ ಮಾಡಿದ್ದರೆ. ಅಲ್ಲದೇ ರಾಸಾಯನಿಕಗಳು ಮತ್ತು ಕಾರ್ಬನ್ಗಳನ್ನು ಬಳಸದೇ ಸಾವಯವ ಇಟ್ಟಿಗೆಗಳನ್ನು ತಯಾರಿಸಿ ಮನೆ ನಿರ್ಮಾಣಕ್ಕೆ ಬಳಸಿದ್ದಾರೆ ವಿರಿಂದರ್ ಭುಲ್ಲಾರ್. ಇನ್ನು ಈ ಮನೆ ಬೇಸಿಗೆ ಸಮಯದಲ್ಲಿ ತಂಪಾಗಿರಲಿದ್ದು, ಚಳಿಯ ಸಮಯದಲ್ಲಿ ಬೆಚ್ಚಗಿನ ಅನುಭವ ಕೊಡಲಿದೆ ಎಂದು ಹೇಳುತ್ತಾರೆ ಭುಲ್ಲಾರ್. ಸಧ್ಯ ಇವರು ಕಟ್ಟಿಸಿರುವ ಮನೆಯ ಬಗ್ಗೆ ಚರ್ಚೆಗಳಾಗುತ್ತಿವೆ. ರಾಸಾಯನಿಕ ವಸ್ತುಗಳನ್ನು ಬಳಸದೇ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಮನೆ ಕಟ್ಟಿರುವ ಭುಲ್ಲಾರ್ ಅವರ ಕಾರ್ಯಕ್ಕೆ ಹಲವಾರು ಜನರು ಮೆಚ್ಚಿಗೆ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಮಾತೃ ಪ್ರೇಮ: ಹುಲಿ ಜೊತೆ ಹೋರಾಡಿ ಮರಿಗಳ ರಕ್ಷಿಸಿದ ತಾಯಿ ಕರಡಿ!