ಬೆಳಗಾವಿಯಲ್ಲಿ ರಾಜಕಾರಣವೇ ಇಲ್ಲ..ಯಾರೋ ಏನೋ ಹೇಳಿದರು ಎಂದರೆ ಅದು ರಾಜಕಾರಣ ಆಗಲ್ಲ:ಸಚಿವ ಕೆ ಜೆ ಜಾರ್ಜ್ - ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ
🎬 Watch Now: Feature Video
Published : Nov 1, 2023, 8:20 PM IST
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.
ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಧ್ವಜಾರೋಹಣ ನೆರವೇರಿಸಿದರು. ವಿವಿಧ ಪೊಲೀಸ್ ರಕ್ಷಣಾ ಪಡೆಗಳಿಂದ ಧ್ವಜ ವಂದನೆಯನ್ನು ಕೆ ಜೆ ಜಾರ್ಜ್ ಸ್ವೀಕರಿಸಿದರು. ಇದೆ ವೇಳೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಎಚ್ ಡಿ ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ವಿಕ್ರಮ್ ಅಮಟೆ ಹಾಜರಿದ್ದರು.
ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ: ನಂತರ ಪತ್ರಕರ್ತರ ಜೊತೆಗೆ ಮಾತನಾಡಿದ ಸಚಿವ ಕೆ ಜೆ ಜಾರ್ಜ್ ಅವರು, ಬೆಳಗಾವಿಯಲ್ಲಿ ರಾಜಕಾರಣ ಎಲ್ಲಿದೆ ? ಅಲ್ಲಿ ರಾಜಕಾರಣವೇ ಇಲ್ಲ. ಅಲ್ಲಿ ಯಾರೋ ಏನೋ ಹೇಳಿದ್ರೂ ಅದೆಲ್ಲ ಅಲ್ಲ ರಾಜಕಾರಣ ಆಗಲ್ಲ. ಚುನಾವಣೆಯಲ್ಲಿ ಫಲಿತಾಂಶ ಏನಿದೆ. ಅದೇ ರಾಜಕಾರಣ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಅವರವರ ಅಭಿಪ್ರಾಯ ಹೇಳಲು ಸಂಪೂರ್ಣ ಸ್ವಾತಂತ್ರ್ಯವಿದೆ. ತೀರ್ಮಾನವನ್ನು ಸಿಎಂ, ಡಿಸಿಎಂ ಹೈಕಮಾಂಡ್ ನೋಡಿ ಕೊಳ್ಳುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ 136 ಶಾಸಕರು ನಾವೆಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ ನಮ್ಮದು . ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆ ಏನೂ ನಡೆಯಲ್ಲ. ಕನ್ನಡಿಗರು ಎಂದು ತಿಳಿಸಿದರು.
ಇದನ್ನೂಓದಿ:ರಾಜ್ಯೋತ್ಸವ: ಧಾರವಾಡದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸಂತೋಷ್ ಲಾಡ್