ಮೂರಡಿ ವರ, ನಾಲ್ಕಡಿ ವಧುವಿನ ವಿಶಿಷ್ಟ ಮದುವೆ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಬ್ಜ ವಧು-ವರ.. ಎರಡು ಕುಟುಂಬಗಳಿಗೆ ಸಂತಸ

🎬 Watch Now: Feature Video

thumbnail

By

Published : Jul 30, 2023, 7:52 PM IST

ಸರನ್(ಬಿಹಾರ) ಯಾರು ಯಾರನ್ನು ಮದುವೆ ಆಗಬೇಕೆನ್ನುವ ವಿವಾಹದ ಋಣಾನುಬಂಧವನ್ನು ಭಗವಂತನು ಮೊದಲೇ ನಿಶ್ಚಯಿಸಿರುತ್ತಾನೆ ಎಂಬ ಲೋಕರೂಢಿ ಇದ್ದು, ಇಂತಹ ಪ್ರಕರಣವೊಂದು ಬಿಹಾರದಲ್ಲಿ ಮುನ್ನೆಲೆಗೆ ಬಂದಿದೆ. ಸರನ್ ಜಿಲ್ಲೆಯಲ್ಲಿ ನಡೆದ ಮೂರೂವರೆ ಅಡಿ ಎತ್ತರದ ವರ, 4 ಅಡಿಯ ವಧುವಿನ ವಿಶಿಷ್ಟ ವಿವಾಹವೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಈ ಇಬ್ಬರು ಕುಬ್ಜ ಜೋಡಿ ಜಾತಿಯ ಬಂಧ ಮುರಿದು ಜಿಲ್ಲೆಯ ಗಧಾದೇವಿ ದೇವಸ್ಥಾನದಲ್ಲಿ ಏಳು ಸುತ್ತು ಹಾಕಿ ಸಪ್ತಪದಿ ತುಳಿಯುವುದರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ವಧು ವರ ಕುಟುಂಬದ ಹಿರಿಯರ ಆಶೀರ್ವಾದ ಪಡೆದರು. ಈ ಮದುವೆಯಿಂದ ಇಬ್ಬರು ಮನೆಯವರು ಬಹಳಷ್ಟು ಖಷಿಯಾಗಿದ್ದಾರೆ.

ಲೆರುವಾ ನಿವಾಸಿ ಸತೇಂದ್ರ ಸಿಂಗ್ ಅವರ ಪುತ್ರ ರೋಹಿತ್ ಮೂರೂವರೆ ಅಡಿ, ಅಂದರೆ 42 ಇಂಚು ಎತ್ತರ ಇರುವ ಕಾರಣದಿಂದ ಇಲ್ಲಿಯವರೆಗೆ ಆತನ ಮದುವೆ ನಡೆದಿರಲಿಲ್ಲ. ಅವನಿಗೆ ತಕ್ಕಂತ ವಧು ಎಷ್ಟೇ ಹುಡುಕಿದರೂ ಕಂಕಣ ಭಾಗ್ಯ ಕೂಡಿಬಂದಿರಲಿಲ್ಲ. ಒಬ್ಬರಿಗೊಬ್ಬರು ಮದುವೆ ಎಂಬ ಪವಿತ್ರ ಬಂಧನ ತುಳಿಯಬೇಕಾದರೆ ದೇವರ ಆಶೀರ್ವಾದ ಬೇಕು ಎನ್ನುವುದು ಈಗ ಸತ್ಯೇಂದ್ರ ಸಿಂಗ್ ಕುಟುಂಬದಲ್ಲಿ ನಿಜವಾಗಿದೆ.

ಮೂರೂವರೆ ಅಡಿಯ ರೋಹಿತ್​ಗೆ ಬನಿಯಾಪುರದ 4 ಅಡಿಯ ವಧು ನೇಹಾ ಎಂಬ ವಧು ಸಿಕ್ಕಿದ್ದಾಳೆ. ಖಬಾಸಿ ನಿವಾಸಿ ಆಗಿರುವ 4 ಅಡಿ ವಧು ನೇಹಾ ಹಾಗೂ ರೋಹಿತ್ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಜಿಲ್ಲೆಯ ಗಧಾದೇವಿ ದೇವಸ್ಥಾನದಲ್ಲಿ ನಡೆದ ಈ ನವ ದಂಪತಿ ರೋಹಿತ್ ನೇಹಾ ಮದುವೆಯಲ್ಲಿ ಕುಟುಂಬ ಸದಸ್ಯರು, ಸಂಬಂಧಿಕರು ಅಷ್ಟೇ ಅಲ್ಲದೇ, ಅವರ ಸ್ನೇಹಿತರು ಮತ್ತು ನೆರೆಹೊರೆಯವರು ಭಾಗವಹಿಸಿ ಶುಭಾಶಯ ಕೋರಿದರು.

ವರನ ಹಿರಿಯ ಸಹೋದರ ಅಮರ್ ಕುಮಾರ್ ಮಾತನಾಡಿ, ರೋಹಿತ್ ತನ್ನ ಎತ್ತರ ಕಡಿಮೆ ಇರುವುದರಿಂದ ಜೀವನದಲ್ಲಿ ಅನೇಕ ರೀತಿಯ ಅಪಹಾಸ್ಯ ಮತ್ತು ಕಿರುಕುಳ ಎದುರಿಸಬೇಕಾಯಿತು. ಈಗ ಅವನ ಅಣ್ಣನಿಗೆ ತಕ್ಕ ಹುಡುಗಿ ಸಿಕ್ಕಿದ್ದರಿಂದ ಮದುವೆಯಾಗಿದೆ. ಇದರಿಂದ ನಮಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ನೇಹಾ ಐದನೇ ತರಗತಿವರೆಗೆ ಓದಿದ್ದಾಳೆ, ಬಹಳ ಬುದ್ಧಿವಂತೆ. ಲೆರುವಾ ನಿವಾಸಿ ಸತ್ಯೇಂದ್ರ ಸಿಂಗ್ ಕುಟುಂಬಕ್ಕೆ ನನ್ನ ಸಹೋದರಿ ತಕ್ಕ ಸೊಸೆಯಾಗಿದ್ದಾಳೆ ಎನ್ನುತ್ತಾನೆ ಆಕೆಯ ಸಹೋದರ ಶೈಲೇಶ್.

ಇದನ್ನೂಓದಿ: Mann ki Baat: ಮೆಹ್ರಮ್ ಇಲ್ಲದೆ 4 ಸಾವಿರ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆ.. ಇದು ದೊಡ್ಡ ಪರಿವರ್ತನೆ: ಮೋದಿ ಮೆಚ್ಚುಗೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.