ಆಟವಾಡುವ ವೇಳೆ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗುವಿನ ರಕ್ಷಣೆ - ವಿಡಿಯೋ - ​ ETV Bharat Karnataka

🎬 Watch Now: Feature Video

thumbnail

By ETV Bharat Karnataka Team

Published : Dec 12, 2023, 8:40 PM IST

Updated : Dec 12, 2023, 10:22 PM IST

ಇಂದೋರ್‌ (ಮಧ್ಯ ಪ್ರದೇಶ) : ಇಲ್ಲಿನ ಖಂಡಾಲಾ ದವ್ರಿ ಫಾಲಿಯಾ ಗ್ರಾಮದಲ್ಲಿ ಆಟವಾಡುವ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ ಸುಮಾರು 2 ವರ್ಷದ ಮಗುವನ್ನು ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಲಾಗಿದೆ. ಮಂಗಳವಾರ ಸಂಜೆ ಘಟನೆ ನಡೆದಿದ್ದು, ಕೊಳವೆ ಬಾವಿಗೆ ಬಿದ್ದ ಮಗುವನ್ನು ವಿಜಯ್ ಎಂದು ಗುರುತಿಸಲಾಗಿತ್ತು. 

ಅಲಿರಾಜಪುರ ಜಿಲ್ಲಾಧಿಕಾರಿ ಡಾ. ಅಭಯ್ ಬೇಡಕರ್, ಎಸ್‌ಪಿ ರಾಜೇಶ್ ವ್ಯಾಸ್, ಶಾಸಕ ಸಿ ಪಟೇಲ್ ಅವರೊಂದಿಗೆ ಎಸ್‌ಡಿಆರ್‌ಎಫ್ ತಂಡ ರಕ್ಷಣಾ ಈಗಾಗಲೇ ಮಗುವಿನ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಜೆಸಿಬಿ ಮೂಲಕ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ಅಗೆದು ಮಗುವನ್ನು ಹೊರ ತರುವ ಮೂಲಕ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. 

ಕಾರ್ಯಾಚರಣೆ ವೇಳೆ ಮುಗುವಿನ ಸುರಕ್ಷತೆಗಾಗಿ ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು. ರಾತ್ರಿಯಾದರೂ ಕೂಡ ಕಾರ್ಯಾಚರಣೆ ಮುಂದುವರೆಸಿದರು. ಆದರೆ ಮಗು ಎಷ್ಟು ಅಡಿ ಆಳದಲ್ಲಿದೆ ಸಿಲುಕಿದೆ ಎಂಬುದನ್ನು ಅಂದಾಜಿಸಲು ಸಾಧ್ಯವಾಗಿರಲಿಲ್ಲ ಎಂದು ರಕ್ಷಣೆಗೂ ಮೊದಲು ಅಲಿರಾಜಪುರ ಎಸ್‌ಪಿ ರಾಜೇಶ್ ವ್ಯಾಸ್ ತಿಳಿಸಿದರು. ಇನ್ನೊಂದೆಡೆ ಪೋಷಕರು ಮತ್ತು ಕುಟುಂಬಸ್ಥರು ಅಧಿಕಾರಿಗಳಿಗೆ ಮಗುವನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡಿದರು.  

ಇದನ್ನೂ ಓದಿ : ವಸತಿ ಪ್ರದೇಶದಲ್ಲಿ ಹುಲಿ ಸಂಚಾರ; ಕ್ರಮಕ್ಕೆ ಮುಂದಾದ ಅರಣ್ಯ ಇಲಾಖೆ

Last Updated : Dec 12, 2023, 10:22 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.