ಒಂದೇ ದಿನದಲ್ಲಿ 120 ಕಿ.ಮೀ ಕ್ರಮಿಸಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಬಂದ ಚಕ್ಕಡಿ: ಗ್ರಾಮದಲ್ಲಿ ಅದ್ಧೂರಿ ಸ್ವಾಗತ - ETV Bharath Kannada news
🎬 Watch Now: Feature Video
ಹುಬ್ಬಳ್ಳಿ: ಚಕ್ಕಡಿ ಕಟ್ಟಿಕೊಂಡು ಜಾತ್ರೆಗೆ ಹೋಗುವ ಸಂಭ್ರಮ ಬೇರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಉಳಿವಿ ಜಾತ್ರೆ, ಮೈಲಾರ ಜಾತ್ರೆ ಹಾಗೂ ಸವದತ್ತಿ ಯಲ್ಲಮ್ಮನ ಜಾತ್ರೆಗೆ ಚಕ್ಕಡಿ ಬಂಡಿ ಕಟ್ಟಿಕೊಂಡು ವಾರಗಟ್ಟಲೇ ಪ್ರಯಾಣಿಸಿ ಜಾತ್ರೆ ಮಾಡಿಕೊಂಡು ಭಕ್ತರು ಬರುತ್ತಿದ್ದರು. ಆದರೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ರೈತರು ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಒಂದೇ ದಿನದಲ್ಲಿ ಹೋಗಿ ಬರುವ ಮೂಲಕ ಸಾಹಸ ಪ್ರದರ್ಶನ ಮಾಡಿದ್ದಾರೆ.
ವಾಹನಗಳನ್ನು ತೆಗೆದುಕೊಂಡು ಒಂದೇ ದಿನದಲ್ಲಿ ಹೋಗಿ ವಾಪಸ್ಸು ಬರುವುದು ಕಷ್ಟದ ಸಂಗತಿಯಾಗಿದೆ. ಹೀಗಿದ್ದರೂ ಕೂಡ ಎತ್ತಿನ ಚಕ್ಕಡಿಯ ಮೂಲಕ ಒಂದೇ ದಿನದಲ್ಲಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ವಾಪsAಗುವ ಮೂಲಕ ಸಾಹಸ ಪ್ರದರ್ಶಿಸಿದ್ದಾರೆ.
ಸೋಮಶೇಖರ ಅಡಿವೆಪ್ಪ ಬೆಂಗೇರಿ ಎಂಬ ರೈತ ತಮ್ಮ ಚಕ್ಕಡಿಯಲ್ಲಿಯೇ ಸುಮಾರು 120 ಕಿಲೋಮೀಟರ್ ಪ್ರಯಾಣ ಮಾಡಿ ಮತ್ತೆ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ. ಹೀಗೆ ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಬಂದ ಚಕ್ಕಡಿ ಗಾಡಿಗೆ ಇಡೀ ಗ್ರಾಮದ ಯುವಕರು ಬೈಕ್ ರ್ಯಾಲಿ ಮೂಲಕ ಸ್ವಾಗತ ಕೋರಿದರು. ಗ್ರಾಮದ ತುಂಬ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಕೃಷಿ ಚಟುವಟಿಕೆಗಳು ಕಡಿಮೆಯಾದ ಬೆನ್ನಲ್ಲೇ ರೈತರು ಎತ್ತುಗಳಿಗೆ ಮನರಂಜನೆಗಾಗಿ ಇಂತಹ ಷರತ್ತುಗಳನ್ನು ಏರ್ಪಡಿಸುತ್ತಾರೆ.
ಇದನ್ನೂ ಓದಿ: ತೆರೆದ ಬಂಡಿ ಸ್ಪರ್ಧೆ ಸುವರ್ಣ ಮಹೋತ್ಸವ: ಮೊದಲು ಬಂದವನಿಗೆ ಕಾರು ಬಹುಮಾನ