ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ದೇವಸ್ಥಾನದಲ್ಲಿ 1100 ಖಾದ್ಯಗಳು ಕೃಷ್ಣನಿಗೆ ಅರ್ಪಣೆ: ವಿಡಿಯೋ
🎬 Watch Now: Feature Video
ಜುನಾಗಢ್(ಗುಜರಾತ್): ದೀಪಾವಳಿ ಹಬ್ಬದ ಎರಡನೇ ದಿನದಂದು ನಡೆಯುವ ಗೋವರ್ಧನ ಪೂಜೆಗೆ ಧಾರ್ಮಿಕ ಮಹತ್ವವೂ ಇದೆ. ಗೋವರ್ಧನ ಪೂಜೆಯಲ್ಲಿ ಕೃಷ್ಣನನ್ನು ಆರಾಧಿಸುವುದು ವಿಶೇಷ. ಜುನಾಗಢದಲ್ಲಿರುವ BAPS ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ಗೋವರ್ಧನ ಪೂಜೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಧಾರ್ಮಿಕ ವಿಧಿವಧಾನಗಳೊಂದಿಗೆ ಗೋವರ್ಧನ ಪೂಜೆ ನೆರವೇರಿಸಲಾಯಿತು. ವಿಶೇಷ ಎಂದರೆ ಮೊದಲ ಬಾರಿಗೆ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಭಗವಾನ್ ಶ್ರೀಕೃಷ್ಣನಿಗೆ 1100 ವಿಭಿನ್ನ ಖಾದ್ಯಗಳನ್ನು ತಯಾರಿಸಿ ಪ್ರಸಾದವಾಗಿ ಅರ್ಪಿಸಲಾಯಿತು.
ಐದು ದಿನಗಳ ಕಾಲ ಶ್ರೀ ಹರಿಯ ಭಕ್ತರು ಸೇರಿ ಈ ವಿಭಿನ್ನ ಖಾದ್ಯಗಳನ್ನು ತಯಾರಿಸಿದ್ದು, ಶ್ರೀ ಕೃಷ್ಣನ ಆರಾಧನೆ ಹಾಗೂ ಕೀರ್ತನೆಯೊಂದಿಗೆ ದರ್ಶನವನ್ನು ತೆರೆಯಲಾಯಿತು. ಜುನಾಗಢದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಈ 1100 ಖಾದ್ಯಗಳ ಅರ್ಪಣೆಯ ಹಬ್ಬದಲ್ಲಿ ನೂರಾರು ಕೃಷ್ಣನ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆದರು. ಸಂತರು, ಮಹಂತರು ಹಾಗೂ ಸ್ವಾಮಿನಾರಾಯಣ ಪಂಥದ ಭಕ್ತರು ಭಾಗವಹಿಸಿದ್ದರು.
ಈ ವಿಶೇಷ ಪ್ರಸಾದ ಅರ್ಪಣೆಯ ಬಗ್ಗೆ ಸ್ವಾಮಿನಾರಾಯಣ ದೇವಸ್ಥಾನದ ಸಾಧು ಜ್ಞಾನರತದಾಸರು ಈಟಿವಿ ಭಾರತ ಜೊತೆ ಮಾತನಾಡಿ, "ಇಂದು ಸ್ವಾಮಿನಾರಾಯಣ ಪಂಥದ ಸಂಪ್ರದಾಯ ಹಾಗೂ ಸನಾತನ ಧರ್ಮದಲ್ಲಿ ಶ್ರೀ ಕೃಷ್ಣನಿಗೆ ಸಂಬಂಧಿಸಿದ ಆಚರಣೆಗಳನ್ನು ನಡೆಸಲಾಯಿತು ಹಾಗೂ ವಿಶೇಷ 1100 ಖಾದ್ಯಗಳನ್ನು ತಯಾರಿಸಿ ಕೃಷ್ಣನಿಗೆ ಅರ್ಪಿಸಲಾಯಿತು." ಎಂದು ಹೇಳಿದರು.
ಇದನ್ನೂ ನೋಡಿ: ಸಾಂಸ್ಕೃತಿಕ ನಗರಿಯಲ್ಲಿ ಹಸಿರು ಪಟಾಕಿ ಕೊಳ್ಳಲು ಜನರ ನಿರಾಸಕ್ತಿ: ಸಂಕಷ್ಟದಲ್ಲಿ ಪಟಾಕಿ ವ್ಯಾಪಾರಸ್ಥರು