thumbnail

By

Published : Mar 18, 2022, 9:19 AM IST

Updated : Feb 3, 2023, 8:20 PM IST

ETV Bharat / Videos

ಪೊಲೀಸ್​ ಬ್ಯಾಂಡ್​ನಲ್ಲಿ ಸಖತ್​ ಆಗಿ ಮೂಡಿ ಬಂದ ಪುಷ್ಪ ಚಿತ್ರದ ‘ಶ್ರೀವಲ್ಲಿ’ ಹಾಡು!

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ‘ಶ್ರೀವಲ್ಲಿ’ ಹಾಡು ಎಲ್ಲೆಡೆ ಜನಪ್ರಿಯವಾಗಿದೆ. ಈ ಹಾಡು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಮನಸೆಳೆದಿದೆ. ಈಗ ಈ ಹಾಡು ಮಹಾರಾಷ್ಟ್ರದ ಮುಂಬೈ ಪೊಲೀಸ್​ ವಲಯದಲ್ಲಿ ಕೇಳಿ ಬಂದಿದೆ. ಹೌದು, ಮುಂಬೈ ಪೊಲೀಸ್​ ತಂಡ ಬ್ಯಾಂಡ್ ಮೂಲಕ ಪುಷ್ಪ ಚಿತ್ರದ ಜನಪ್ರಿಯ ಶ್ರೀವಲ್ಲಿ ಹಾಡನ್ನು ಪ್ರದರ್ಶಿಸಿತು. ಬಳಿಕ ಈ ಹಾಡಿನ ವಿಡಿಯೋವನ್ನು ಮುಂಬೈ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿ ‘ಮುಂಬೈ ಪೊಲೀಸರ ಸಂಗೀತ ಪಯಣ ಎಂದಿಗೂ ನಿಲ್ಲುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ. ಶ್ರೀವಲ್ಲಿ ಹಾಡಿನ ಬ್ಯಾಂಡ್ ಆವೃತ್ತಿಯನ್ನು ಡ್ರಮ್ಸ್, ಸ್ಯಾಕ್ಸೋಫೋನ್, ಕೊಳಲು ಮತ್ತು ಇತರ ಅನೇಕ ವಾದ್ಯಗಳೊಂದಿಗೆ ಸಂಯೋಜಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.