ದಾರುಣ ವಿದಾಯ... ಗಣೇಶನೊಂದಿಗೆ ಮುಳುಗಿದವು ಹನ್ನೊಂದು ಜೀವ...ವಿಡಿಯೋ - ಭೋಪಾಲ್ ದುರಂತ
🎬 Watch Now: Feature Video
ಭೋಪಾಲ್: ಗಣಪತಿ ನಿಮಜ್ಜನದ ವೇಳೆ ಬೋಟ್ ಮಗುಚಿ ಭಾರಿ ದುರಂತ ಸಂಭವಿಸಿದ್ದು, 11 ಮಂದಿ ಜಲಸಮಾಧಿ ಆಗಿದ್ದಾರೆ. ಇಂದು ಬೆಳಗ್ಗೆ ಭೋಪಾಲ್ನ ಕತ್ಲಾಪುರ ಘಾಟ್ನಲ್ಲಿ ಈ ಅವಘಡ ನಡೆದಿದೆ. 11 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬೋಟ್ ಮುಳುಗುತ್ತಿದ್ದಂತೆ 6 ಮಂದಿಯನ್ನು ರಕ್ಷಿಸಲಾಗಿದೆ. ಮೃತರ ಕುಟುಂಬಸ್ಥರಿಗೆ ತಲಾ ನಾಲ್ಕು ಲಕ್ಷ ರೂ. ಮುಖ್ಯಮಂತ್ರಿ ಕಮಲ್ನಾಥ್ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಘಟನೆಯ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ. ದುರಂತಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
Last Updated : Sep 13, 2019, 1:28 PM IST