ನೋಡಿ: ಕ್ರಿಸ್‌ಮಸ್‌ ದ್ವೀಪದಲ್ಲಿ ಲಕ್ಷಾಂತರ ಕೆಂಪು ಏಡಿಗಳ ವಲಸೆ ಆರಂಭ - ವಲಸೆ ಆರಂಭಿಸಿರುವ ಕೆಂಪು ಏಡಿಗಳು

🎬 Watch Now: Feature Video

thumbnail

By

Published : Nov 24, 2021, 8:15 PM IST

ಆಸ್ಟ್ರೇಲಿಯಾದ ಕ್ರಿಸ್‌ಮಸ್‌ ದ್ವೀಪದಲ್ಲಿ ಲಕ್ಷಾಂತರ ಕೆಂಪು ಏಡಿಗಳು ತಮ್ಮ ವಾರ್ಷಿಕ ವಲಸೆ ಆರಂಭಿಸಿದ್ದು, ಇದಕ್ಕಾಗಿ ಕ್ರಿಸ್‌ಮಸ್ ಐಲ್ಯಾಂಡ್ ರಾಷ್ಟ್ರೀಯ ಉದ್ಯಾನವನದ ಉದ್ಯೋಗಿಗಳು ಮೈಲುಗಟ್ಟಲೆ ರಸ್ತೆಯಲ್ಲಿ ವಾಹನಗಳಿಗೆ ನಿರ್ಬಂಧ ಹೇರಿದ್ದಾರೆ. ಕ್ರಿಸ್‌ಮಸ್‌ ದ್ವೀಪದಲ್ಲಿ ಆರ್ದ್ರ ಋತುವಿನಲ್ಲಿ ಮೊದಲ ಮಳೆ ಪ್ರಾರಂಭವಾದಾಗ ಈ ಕೆಂಪು ಏಡಿಗಳು ಹೀಗೆ ವಲಸೆ ಆರಂಭಿಸುತ್ತವೆ. ಏಡಿಗಳು ತಮ್ಮ ಕಾಡಿನ ಮನೆಯಿಂದ ಸಮುದ್ರಕ್ಕೆ ಅಪಾರ ಸಂಖ್ಯೆಯಲ್ಲಿ ಚಲಿಸುತ್ತವೆ. ತಿಂಗಳಾಂತ್ಯಕ್ಕೆ ಮೊಟ್ಟೆಯಿಡುವಿಕೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದ್ದು, ಪ್ರತೀ ಹೆಣ್ಣು ಏಡಿ 1 ಲಕ್ಷದ ವರೆಗೆ ಮೊಟ್ಟೆಗಳನ್ನು ಸಾಗರಕ್ಕೆ ಬಿಡುತ್ತದಂತೆ. ಪರಿಣಾಮವಾಗಿ, ಮರಿ ಏಡಿಗಳು ಒಂದು ತಿಂಗಳ ನಂತರ ದಡಕ್ಕೆ ಹಿಂತಿರುಗುತ್ತವೆ ಎಂದು ಹೇಳಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.