ಪ್ರಧಾನಿ ಮೋದಿ ಕರೆಗೆ ಪಾಕಿಸ್ತಾನದಲ್ಲೂ ಪ್ರಕಾಶಿಸಿದ 'ದೀಪ'! - ಪಾಕಿಸ್ತಾನದಲ್ಲೂ ಪ್ರಕಾಶಿಸಿದ ದೀಪ
🎬 Watch Now: Feature Video
ಇಸ್ಲಾಮಾಬಾದ್: ರಕ್ಕಸ ಸೋಂಕು ಕೊರೊನಾ ವಿರುದ್ಧ ದೇಶವೇ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ನೀಡಿದ್ದ 'ದೀಪ ಹಚ್ಚಿ' ಎನ್ನುವ ಕರೆಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲೂ ದೀಪ ಹಚ್ಚಲಾಗಿದೆ. ಅಲ್ಲಿನ ಅಧಿಕಾರಿಗಳು ಲೈಟ್ ಆಫ್ ಮಾಡಿ ದೀಪ ಹಚ್ಚುವ ಮೂಲಕ ನಮೋ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಳಿದಂತೆ ದೇಶದೆಲ್ಲಡೆ ನಮೋ ಮನವಿಗೆ ಸಕಾರಾತ್ಮಕ ಸ್ಪಂದನೆ ಲಭ್ಯವಾಗಿದ್ದು, ಸಂಸದರು, ಸೆಲೆಬ್ರಿಟಿಗಳು, ಕ್ರಿಕೆಟ್ ಪ್ಲೇಯರ್ಸ್ ಹಾಗೂ ಜನ ಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.