ಯುಎಸ್ ಕ್ಯಾಪಿಟಲ್ ಮೇಲಿನ ಮುತ್ತಿಗೆ ಕೊನೆಗೊಳಿಸಬೇಕೆಂದು ಜೋ ಬೈಡನ್ ಒತ್ತಾಯ - ಯುಎಸ್ ಪ್ರತಿಭಟನೆ
🎬 Watch Now: Feature Video
ವಾಷಿಂಗ್ಟನ್ ಡಿಸಿ (ಯುಎಸ್): ಯುಎಸ್ ಕ್ಯಾಪಿಟಲ್ ಜನಸಮೂಹ ಹಿಂಸಾಚಾರದ ನಂತರ, ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ದೂರದರ್ಶನಕ್ಕೆ ಹೊಗಿ ಗಲಾಟೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. "ಅಧ್ಯಕ್ಷ ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು ಮತ್ತು ಈ ಮುತ್ತಿಗೆಗೆ ಅಂತ್ಯ ಹಾಡಬೇಕು. ಈ ಸಂಬಂಧ ಅವರು ರಾಷ್ಟ್ರೀಯ ದೂರದರ್ಶನಕ್ಕೆ ಹೋಗಬೇಕೆಂದು ನಾನು ಕರೆ ನೀಡುತ್ತೇನೆ" ಎಂದು ಯುಎಸ್ ಚುನಾಯಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ’’ಇದು ನಮ್ಮ ಪ್ರಜಾಪ್ರಭುತ್ವದ ಮೆಲೆ ದಾಳಿಯಾಗಿದೆ. ಜನ ಪ್ರತಿನಿಧಿಗಳು ಮತ್ತು ಕ್ಯಾಪಿಟಲ್ ಹಿಲ್ ಪೊಲೀಸರ ಮೇಲೆ ಹಲ್ಲೆಯಾಗುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.