ಕ್ರಿಸ್‌ಮಸ್ ಹಿನ್ನೆಲೆ ಬಾಗಿಲು ತೆರೆದ ಹೋಲಿ ಲ್ಯಾಂಡ್‌ನಲ್ಲಿರುವ ಕ್ಯಾಥೊಲಿಕ್ ಚರ್ಚ್ - ವೆಸ್ಟ್ ಬ್ಯಾಂಕ್‌ನ ಹೋಲಿ ಲ್ಯಾಂಡ್
🎬 Watch Now: Feature Video
ವೆಸ್ಟ್ ಬ್ಯಾಂಕ್: ದೇಶಕ್ಕೆ ವಕ್ಕರಿಸಿದ್ದ ಮಹಾಮಾರಿ ಕೊರೊನಾ ಹಿನ್ನೆಲೆ, ವೆಸ್ಟ್ ಬ್ಯಾಂಕ್‌ನ ಹೋಲಿ ಲ್ಯಾಂಡ್‌ನಲ್ಲಿರುವ ಕ್ಯಾಥೊಲಿಕ್ ಚರ್ಚ್ ಅನ್ನು ಮುಚ್ಚಲಾಗಿತ್ತು. ಆದ್ರೆ ಕ್ರಿಸ್‌ಮಸ್ ಹಬ್ಬದ ಹಿನ್ನೆಲೆ, ಕ್ಯಾಥೊಲಿಕ್ ಚರ್ಚ್ ಉಸ್ತುವಾರಿಗಳು ಆಗಮಿಸಿ ಚರ್ಚ್ ಬಾಗಿಲನ್ನು ತೆರೆದರು. ಫಾದರ್ ಫ್ರಾನ್ಸೆಸ್ಕೊ ಪ್ಯಾಟನ್ ಮತ್ತು ಅಧಿಕಾರಿಗಳು ಚರ್ಚ್ನತ್ತ ಆಗಮಿಸುವ ವೇಳೆ, ಸ್ಕೌಟ್ಸ್ ತಂಡ ಬ್ಯಾಗ್‌ಪೈಪ್ಸ್ ಮತ್ತು ಡ್ರಮ್ಸ್ಗಳನ್ನು ನುಡಿಸುತ್ತಾ ಬಂದರು. ಈ ಸಂದರ್ಭ ಅಲ್ಲಿ ನೆರೆದಿದ್ದವರೆಲ್ಲರೂ, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಿದ್ದು ಕಂಡುಬಂತು. ಇನ್ನೇನು ಡಿಸೆಂಬರ್ ತಿಂಗಳಿಗೆ ಕಾಲಿಡುತ್ತಿದ್ದು, ಎಲ್ಲೆಡೆ ಕ್ರಿಸ್‌ಮಸ್ ಹಬ್ಬದ ಸಿದ್ಧತೆ ನಡೆಯುತ್ತಿದೆ ಮತ್ತು ಸಂಭ್ರಮ ಮನೆಮಾಡಿದೆ.