ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ರೈಲು ಹತ್ತಲು ಬಿಡುತ್ತಿಲ್ಲ: ಪೋಷಕರ ಅಳಲು - ಉಕ್ರೇನ್ನಲ್ಲಿ ಸಿಲುಕಿರುವ ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ರವಿತೇಜ ಎಂಬ ವಿದ್ಯಾರ್ಥಿ
🎬 Watch Now: Feature Video
ತುಮಕೂರು: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ತುಮಕೂರಿನ ವಿದ್ಯಾರ್ಥಿ ಕಾರ್ಕಿವ್ನಿಂದ ಹೊರಬರಲು, ಟ್ರೈನ್ ಹತ್ತಲು ಕೂಡ ಸ್ಥಳೀಯರು ಬಿಡುತ್ತಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಈಗಾಗಲೆ ತಕ್ಷಣ ವಿದ್ಯಾರ್ಥಿಗಳು ಕಾರ್ಕಿವ್ ನಿಂದ ಹೊರಬರಬೇಕೆಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಉಕ್ರೇನ್ ಬಾರ್ಡರ್ಗೆ ಹೋಗಲು ರೈಲನ್ನು ಅವಲಂಬಿಸಬೇಕಿದೆ. ಆದರೆ ಸ್ಥಳೀಯರು ವಿದ್ಯಾರ್ಥಿಗಳಿಗೆ ರೈಲನ್ನು ಹತ್ತಿ ತೆರಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ತುಮಕೂರಿನಲ್ಲಿರುವ ಪೋಷಕರು ಅಳಲು ತೋಡಿಕೊಂಡಿದ್ದಾರೆ.
Last Updated : Feb 3, 2023, 8:18 PM IST