ನಡುರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದ ಖಾಸಗಿ ಸಂಸ್ಥೆ ಬಸ್! - ಹಾಜಿಪುರದಲ್ಲಿ ಹೊತ್ತಿ ಉರಿದ ಖಾಸಗಿ ಬಸ್
🎬 Watch Now: Feature Video
ವೈಶಾಲಿ(ಬಿಹಾರ್) : ಮುಜಾಫರ್‌ಪುರದಿಂದ ಹಾಜಿಪುರ ಮೂಲಕ ರಾಜಧಾನಿ ಪಾಟ್ನಾಗೆ ಬರುತ್ತಿದ್ದ ಖಾಸಗಿ ಬಸ್ ನಡುರಸ್ತೆಯಲ್ಲಿ ಧಗಧಗನೇ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಈ ವೇಳೆ ಬಸ್ನಲ್ಲಿ ಪ್ರಯಾಣಿಕರಿರಲಿಲ್ಲ. ಘಟನೆಯಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರೂ, ಸಂಪೂರ್ಣ ಬಸ್ ಸುಟ್ಟು ಕರಕಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
Last Updated : Feb 3, 2023, 8:21 PM IST