'ಶಿವಾಜಿ ಸುರತ್ಕಲ್ 2' ಸಿನಿಮಾ ವೀಕ್ಷಿಸಿದ ಯದುವೀರ್ ಒಡೆಯರ್ - Yaduveer Wodeyar Watched Movie

🎬 Watch Now: Feature Video

thumbnail

By

Published : May 25, 2023, 2:30 PM IST

ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್ 2' ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಮೇಶ್ ಅರವಿಂದ್ ಸಹ ಉಪಸ್ಥಿತರಿದ್ದರು. 2020 ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್ ಚಿತ್ರದ ಮುಂದುವರೆದ ಭಾಗ ಇದಾಗಿದ್ದು 41 ದಿನಗಳನ್ನು ಪೂರೈಸಿ, 50 ನೇ ದಿನದತ್ತ ಸಾಗುತ್ತಿದೆ. ಮೊದಲ ಭಾಗದಲ್ಲೇ ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಂಡು ಸಿನಿಪ್ರಿಯರ ಮನಗೆದ್ದಿದ್ದ ರಮೇಶ್ ಅರವಿಂದ್, ಇದೀಗ ಭಾಗ 2 ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿದ್ದಾರೆ. 

ಈಗಾಗಲೇ ರಾಜ್ಯದ ಹಲವು ಗಣ್ಯರು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. 'ನನಗೆ ಪತ್ತೆದಾರಿ ಸಿನಿಮಾಗಳು ಬಹಳ ಇಷ್ಟ. ಶಿವಾಜಿ ಸುರತ್ಕಲ್ 2 ಚಿತ್ರ ತುಂಬಾ ಚೆನ್ನಾಗಿದೆ. ಈ ಚಿತ್ರದ ಮುಂದುವರಿದ ಭಾಗಗಳು ಇನ್ನು ಹೆಚ್ಚಾಗಿ ಬರಲಿ' ಎಂದು ಯದುವೀರ್ ಒಡೆಯರ್ ಹಾರೈಸಿದರು.

ಚಿತ್ರದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನ ಮಾಡಿದ್ದರು. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತವಿದೆ. 

ಇದನ್ನೂ ಓದಿ: 'ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ' ಚಿತ್ರದ ಮೂಲಕ ನಾಯಕ ನಟರಾದ ಹೊನ್ನರಾಜ್

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.