ಗುಡ್ ಬೈ ಸಿನೆಮಾದ ಸ್ಟುಪಿಡ್ ಜೊತೆ ಪ್ರೀತಿಯಲ್ಲಿ ಬಿದ್ದ ರಶ್ಮಿಕಾ - ಈಟಿವಿ ಭಾರತ
🎬 Watch Now: Feature Video
ಗುಡ್‌ಬೈ ಸಿನೆಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ, ಚಿತ್ರದಲ್ಲಿ ಕಾಣಿಸಿಕೊಂಡಿರುವ ನಾಯಿಮರಿ ಬಗ್ಗೆ ಮಾತನಾಡಿದ್ದಾರೆ. ಮುಂಬೈನಲ್ಲಿ ಗುಡ್ ಬೈ ಸಿನೆಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ಚಿತ್ರದಲ್ಲಿರುವ ನಾಯಿಮರಿಯನ್ನು ತುಂಬಾ ಪ್ರೀತಿಸುತ್ತೇನೆ. ಈ ನಾಯಿ ಮರಿಗೆ ಸ್ಟುಪಿಡ್ ಎಂದು ಹೆಸರಿಡಲಾಗಿದ್ದು,ಇದೀಗ ನನ್ನ ಮನೆಯಲ್ಲಿದೆ ಎಂದು ಹೇಳಿದ್ದಾರೆ. ಗುಡ್ ಬೈ ಸಿನೆಮಾದಲ್ಲಿ ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು,ವಿಕಾಸ್ ಬೌಲ್ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೇ ಬರುವ ಅ.7ರಂದು ಸಿನೆಮಾ ಬಿಡುಗಡೆಯಾಗಲಿದೆ.
Last Updated : Feb 3, 2023, 8:27 PM IST