ಸೆ.15, 16ರಂದು ಸೈಮಾ ಅವಾರ್ಡ್ಸ್ ಕಾರ್ಯಕ್ರಮ: ನಟರಾದ ರಾಣಾ ದಗ್ಗುಬಾಟಿ​, ಮೃಣಾಲ್​ ಠಾಕೂರ್​ ಮಾಹಿತಿ​ - ಸೌತ್​ ನಟರಾದ ರಾಣಾ ದಗ್ಗುಬಾಟಿ ಮತ್ತು ಮೃಣಾಲ್ ಠಾಕೂರ್

🎬 Watch Now: Feature Video

thumbnail

By

Published : Jul 7, 2023, 7:20 PM IST

SIIMA - 'ಸೌತ್ ಇಂಡಿಯನ್ ಇಂಟರ್​ನ್ಯಾಷನಲ್​ ಮೂವಿ ಅವಾರ್ಡ್ಸ್​' 2012ರಲ್ಲಿ ಆರಂಭಗೊಂಡಿದ್ದು, ಈ ಬಾರಿ ಹನ್ನೊಂದನೇ ಆವೃತ್ತಿಯೊಂದಿಗೆ ಮರಳಿದೆ. ಸೈಮಾ ಪ್ರಶಸ್ತಿ ಸಮಾರಂಭವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ದಕ್ಷಿಣ ಭಾರತದ ಅತ್ಯುನ್ನತ ಸಿನಿಮಾ ಪ್ರಶಸ್ತಿಗಳಲ್ಲಿ ಇದು ಒಂದಾಗಿದೆ. ನಾಲ್ಕು ರಾಜ್ಯಗಳ ತಾರೆಯರ, ತಂತ್ರಜ್ಞರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ ಸೈಮಾ ಅವಾರ್ಡ್ಸ್​ಗೆ ಈ ವರ್ಷದ ಮುಹೂರ್ತ ನಿಗದಿಯಾಗಿದೆ.

11ನೇ ಸೈಮಾ ಪ್ರಶಸ್ತಿ ಸಮಾರಂಭವು ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 15 ಮತ್ತು 16 ರಂದು ನಡೆಯಲಿದೆ. ದುಬೈನ ಹಬ್ಟೂರ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸೌತ್​ ನಟರಾದ ರಾಣಾ ದಗ್ಗುಬಾಟಿ ಮತ್ತು ಮೃಣಾಲ್ ಠಾಕೂರ್ ಅವರ ಉಪಸ್ಥಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕವನ್ನು ಘೋಷಿಸಲಾಗಿದೆ.

ಸೈಮಾ ಅವಾರ್ಡ್ಸ್​ನ ಪ್ರಾರಂಭದಿಂದ ಸಹಕರಿಸುತ್ತಿರುವ ರಾಣಾ, "ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮದಿಂದ ದಕ್ಷಿಣ ಭಾರತದ ಅತ್ಯುತ್ತಮ ಚಲನಚಿತ್ರಗಳನ್ನು ಆಚರಿಸುವ ಮೂಲಕ ಸೈಮಾ ಅನನ್ಯವಾಗಿದೆ" ಎಂದು ಹೇಳಿದ್ದಾರೆ. "ನಾನು ಮೊದಲ ಬಾರಿಗೆ ಸೈಮಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. 'ನಾವೆಲ್ಲರೂ ಒಂದೇ' ಎಂಬ ಭಾವದಲ್ಲಿ ಸೈಮಾ ವೇದಿಕೆಗೆ ಪ್ರವೇಶಿಸಲು ಉತ್ಸುಕನಾಗಿದ್ದೇನೆ" ಎಂದು ಮೃಣಾಲ್ ಠಾಕೂರ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅರುಣ್ ರಾಮ್ ಗೌಡ-ಅಯೋಧ್ಯೆಯಲ್ಲಿ ಫಸ್ಟ್ ಗಿಂಪ್ಸ್ ಅನಾವರಣ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.